ಎನ್ ಡಿಟಿವಿ ಹಿಂದೂ ವಾಹಿನಿ ಮಾರಾಟಕ್ಕಿದೆ
ಚೆನ್ನೈ,
ಜೂ
13:ತಮಿಳರ
ಅಭಿರುಚಿ
ಅರಿಯದೆ
ನಗರ
ಕೇಂದ್ರಿತ
ಸುದ್ದಿ
ಹಾಗೂ
ಮನರಂಜನೆ
ಟಿವಿಚಾನೆಲ್
ಅರಂಭಿಸಿದ್ದ
ಎನ್
ಡಿಟಿವಿ
ಕೈಸುಟ್ಟಿಕೊಂಡಿದೆ.
ರಾಷ್ಟ್ರದ
ಪ್ರಮುಖ
ಸುದ್ದಿ
ವಾಹಿನಿ
ಎನ್‌ಡಿ
ಟಿವಿ
ಹಾಗೂ
ಚೆನ್ನೈ
ಮೂಲದ
ದಿನ
ಪತ್ರಿಕೆ
ಹಿಂದು
ಕಳೆದ
2009
ರ
ಮದ್ಯ
ಭಾಗದಲ್ಲಿ
ಸಮಪಾಲಿನ
ಸಹಯೋಗದಲ್ಲಿ
ಸ್ಥಾಪಿಸಲಾಗಿದ್ದ
ಎನ್‌ಡಿ
ಟಿವಿ
-
ಹಿಂದು
ಚಾನೆಲ್
ಗಳನ್ನು
ಮಾರಾಟಕ್ಕಿಡಲಾಗಿದೆ.
id="toptextpromo">
ಮೂಲಗಳ
ಪ್ರಕಾರ ಈ ಚಾನೆಲ್ ಗೆ ವೀಕ್ಷಕರ ಕೊರತೆ ಹಾಗೂ ಜಾಹೀರಾತು ಆದಾಯ ಕಡಿಮೆ ಪ್ರಮಾಣದಲ್ಲಿರುವದೇ ಇದಕ್ಕೆ ಕಾರಣ. ಚೆನ್ನೈನಲ್ಲಿ ತಮಿಳಿನ ನೂರಕ್ಕೂ ಹೆಚ್ಚು ಚಾನೆಲ್ ಗಳಿದ್ದು ಇಲ್ಲಿ ಸ್ಪರ್ಧೆ ಕಷ್ಟವಾಗಿದ್ದು ಅದರಲ್ಲೂ ಇಂಗ್ಲೀಷ್ ಚಾನೆಲ್ ಗೆ ಅವಕಾಶ ಕಡಿಮೆ ಎನ್ನಲಾಗಿದೆ. ಬ್ಯಾಂಕರ್ ಗಳ ಪ್ರಕಾರ ಎರಡು ಮಾಧ್ಯಮ ಕಂಪೆನಿಗಳು ಈ ಚಾನೆಲ್ ನ್ನು ಖರೀದಿಸಲು ಯೋಚಿಸುತ್ತಿವೆ. ಈ ಕುರಿತು ಪ್ರತಿಕ್ರಿಯಿಸಿದ ಹಿಂದೂ ಸಮೂಹದ ಸಂಪಾದಕ ಎನ್ ರಾಮ್ ಅವರು ಈ ಕುರಿತು ಎನ್‌ಡಿ ಟಿವಿ ಮಾತ್ರ ಅಧಿಕೃತವಾಗಿ ಮಾತನಾಡಬಹುದು ಎಂದರು. id='are-slot-1' class='oiad oi-axt oiadv'> id='top-searched-articles'>ಸಹಯೋಗದ
ಆರಂಬಕ್ಕೆ ಮುನ್ನ ಸ್ಥಳೀಯ ಭಾಷಾ ಚಾನೆಲ್ ಆರಂಭಿಸುವ ಯೋಚನೆ ಇತ್ತಾದರೂ ನಂತರ ಇಂಗ್ಲೀಷ್ ಭಾಷಾ ಸುದ್ದಿ ಚಾನೆಲ್ ಆರಂಭಿಸಲಾಯಿತು. ಇದೇ ಸಹಯೋಗಕ್ಕೆ ಹಿನ್ನಡೆ ಎನ್ನಲಾಗಿದೆ. ಎನ್‌ಡಿಟಿವಿ ಮೆಟ್ರೋ ನೇಷನ್ ಎಂಬ ನಗರಗಳಿಗೆ ಸೀಮಿತವಾದ ಸುದ್ದಿ ಚಾನೆಲ್ ನ್ನು ರಾಷ್ಟ್ರಮಟ್ಟದಲ್ಲಿ ಆರಂಭಿಸಿದ ಎರಡು ವರ್ಷಗಳ ನಂತರ ಸಹಯೋಗದೊಂದಿಗೆ ಚಾನೆಲ್ ಆರಂಭಿಸಿತು.











Click it and Unblock the Notifications