ಮುಂಬೈನಲ್ಲಿ ಮಿಡ್ ಡೇ ಕ್ರೈಂ ಪತ್ರಕರ್ತನ ಹತ್ಯೆ
ಮುಂಬೈ,
ಜೂ. 11 : ನಾಲ್ವರು ಅಪರಿಚಿತ ದುಷ್ಕರ್ಮಿಗಳು ಮಿಡ್ ಡೇ ಪತ್ರಿಕೆಯಲ್ಲಿ ಕ್ರೈಂ ರಿಪೋರ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರೊಬ್ಬರ ಮೇಲೆ ಶನಿವಾರ, ಜೂ. 11ರಂದು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. id="toptextpromo">ಜ್ಯೋತಿರ್ಮೊಯ್
ಡೇ ಎಂಬ ಪತ್ರಕರ್ತರು ಮಿಡ್ ಡೇ ಪತ್ರಿಕೆಯಲ್ಲಿ ಹಲವಾರು ವರ್ಷಗಳಿಂದ ಅಪರಾಧ ಜಗತ್ತಿನ ಕುರಿತು ತನಿಖಾ ವರದಿ ಮಾಡುತ್ತಿದ್ದರು. ಇತ್ತೀಚೆಗೆ ಅವರಿಗೆ ಕೊಲೆ ಬೆದರಿಕೆ ಕರೆಗಳು ಕೂಡ ಬರುತ್ತಿದ್ದವು. ಆದರೆ, ಅವರು ಪೊಲೀಸ್ ರಕ್ಷಣೆಯನ್ನು ಕೋರಿರಲಿಲ್ಲ. id='are-slot-1' class='oiad oi-axt oiadv'> id='top-searched-articles'>ಪೊವೈ
ಎಂಬಲ್ಲಿ ಸ್ಪೆಕ್ಟ್ರಾ ಕಟ್ಟಡದ ಬಳಿ ಅತಿ ಹತ್ತಿರದಿಂದಲೇ ಡೇ ಮೇಲೆ ಹಂತಕರು ಗುಂಡು ಹಾರಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಡೇಯನ್ನು ಹೀರಾನಂದಾನಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಹಾಡು ಹಗಲೇ ನಡೆದಿರುವ ಈ ಘಟನೆ ಮುಂಬೈನ ಪತ್ರಿಕಾ ಜಗತ್ತನ್ನು ತಲ್ಲಣಗೊಳಿಸಿದೆ.











Click it and Unblock the Notifications