ಕಾಲೇಜು ಹುಡುಗೀರ ಮೇಲೆ ಕಾರುಬಿಟ್ಟ ಲವ್ ಹುಚ್ಚ
ಭೋಪಾಲ,
ಜೂನ್ 10: ಇದೊಂದು ರೀತಿಯ ಲವ್ 'ಆಕ್ಸಿಡೆಂಟ್'. ಗುರುವಾರ ಸಂಜೆ ಏನಾಯಿತೆಂದರೆ ಇಲ್ಲಿನ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯೊಬ್ಬ ಅದೇ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ಮೇಲೆ ತನ್ನ ಕಾರು ಹರಿಯಬಿಟ್ಟಿದ್ದಾನೆ. ಕಾರು ನುಗ್ಗಿಸಿದ ಆರೋಪಿ ಮಹೇಂದ್ರ ಯಾದವ್ ಕಾರು ಬಿಟ್ಟು, ಕಾಲ್ಕಿತ್ತಿದ್ದಾನೆ. id="toptextpromo">ತೃತೀಯ
ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಮಹೇಂದ್ರ ತನ್ನ ಸಹಪಾಠಿಯಿಂದ ಪ್ರೇಮ ಭಿಕ್ಷೆ ಕೋರಿದ್ದಾನೆ. ಆದರೆ ಅವಳು ನಿರಾಕರಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಮಹೇಂದ್ರ ತನ್ನ ಕಾರನ್ನು ತಂದು ಅವಳತ್ತ ನುಗ್ಗಿಸಿದ್ದಾನೆ. ಅವಳ ಜತೆಗೆ ಹೆಜ್ಜೆ ಹಾಕುತ್ತಿದ್ದ ಇನ್ನೂ ಇಬ್ಬರು ವಿದ್ಯಾರ್ಥಿನಿಯರತ್ತಲೂ ಮಹೇಂದ್ರನ ಕಾರು ನುಗ್ಗಿದೆ. id='are-slot-1' class='oiad oi-axt oiadv'> id='top-searched-articles'>ಮಹೇಂದ್ರ
ಅನೇಕ ದಿನಗಳಿಂದ ತನ್ನ ಪ್ರೇಮ ನಿವೇದನೆ ಮಾಡುತ್ತಿದ್ದ. ಅವಳನ್ನು ಎಲ್ಲೆಂದರಲ್ಲಿ ಪೀಡಿಸುತ್ತಿದ್ದ. ಕೊನೆಗೆ ಪಾಗಲ್ ಪ್ರೇಮಿ ನಮಗೂ ಕಂಟಕವಾಗಿದ್ದಾನೆ ಎಂದು ಎಂದು ಬದುಕುಳಿದ ಸಹಪಾಠಿಗಳ ಪೈಕಿ ಒಬ್ಬ ಯುವತಿ ಹೇಳಿದ್ದಾಳೆ.











Click it and Unblock the Notifications