ಜಯನಗರ ಆರ್ಟಿಓನನ್ನು ಕಿತ್ತು ಬಿಸಾಡಿ : ಕರ್ನಾಟಕ ಹೈಕೋರ್ಟ್

ಲಿಂಗರಾಜುವನ್ನು ಕೂಡಲೆ ಕಿತ್ತು ಬಿಸಾಡದಿದ್ದರೆ ಅವರನ್ನು ಅಮಾನತಿನಲ್ಲಿಡಲು ನ್ಯಾಯಾಂಗ ಆದೇಶವನ್ನು ಹೊರಡಿಸಲಾಗುವುದು ಎಂದು ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಥ ಅವ್ಯವಹಾರಗಳನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ತರಾಮರಿ ಉಗಿದಿದ್ದಾರೆ.
ಈ ಸಾರಿಗೆ ಕಚೇರಿಯಲ್ಲಿ ಆಟೋ ಪರ್ಮಿಟ್ ಗಳನ್ನು ಹುರಿಗಡಲೆಯಂತೆ ನೀಡುತ್ತಿರುವುದನ್ನು ಪ್ರಶ್ನಿಸಿ ಜಬಿಯುಲ್ಲಾ ಎಂಬುವವರು ರಿಟ್ ಅರ್ಜಿ ಸಲ್ಲಿಸಿದ್ದರು. ಲಿಂಗರಾಜು ಒಬ್ಬೇ ಒಬ್ಬ ವ್ಯಕ್ತಿಗೆ 8 ಪರ್ಮಿಟ್ ಗಳನ್ನು ನೀಡಿರುವುದನ್ನೂ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.
ಜಯನಗರ ಕಚೇರಿಯಲ್ಲಿ ಮಾತ್ರವಲ್ಲ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಕೆಲಸದ ವಾತಾವರಣ ಹದಗೆಟ್ಟು ಹೋಗಿದೆ. ಯಾವ ಅಧಿಕಾರಿಯನ್ನು ಡೆಪ್ಯುಟೇಷನ್ ಮೇಲೆ ಎಲ್ಲಿ ನಿಯೋಜಿಸಲಾಗಿದೆ ಎಂಬಿತ್ಯಾದಿ ವಿವರಗಳನ್ನು ಶುಕ್ರವಾರದೊಳಗೆ ನೀಡಬೇಕು ಎಂದು ಕೋರ್ಟ್ ಆದೇಶಿಸಿದೆ.












Click it and Unblock the Notifications