ಸುಪ್ರೀಂ ಕೋರ್ಟ್ ನೋಟಿಸ್: ಸರಕಾರಕ್ಕೆ ಮುಖಭಂಗ
ನವದೆಹಲಿ,
ಜೂನ್ 6 : ಯೋಗ ಗುರು ಬಾಬಾ ರಾಮದೇವ್ ಅವರನ್ನು ಶನಿವಾರ ಮಧ್ಯ ರಾತ್ರಿ ಹೊರದಬ್ಬಿದ್ದು ಏಕೆ ಎಂಬುದರ ಬಗ್ಗೆ ಸಂಪೂರ್ಣ ವಿವರಣೆ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೋಮವಾರ ನೋಟಿಸ್ ನೀಡಿದೆ. ಉತ್ತರಿಸಲು ಎರಡು ವಾರಗಳ ಗಡುವು ನೀಡಿದ್ದು, ರಾಮದೇವ್ ಅವರ ಸತ್ಯಾಗ್ರಹವನ್ನು ಹತ್ತಿಕ್ಕಲು ಹವಣಿಸುತ್ತಿರುವ ಕೇಂದ್ರಕ್ಕೆ ಇದರಿಂದ ತೀವ್ರ ಹಿನ್ನಡೆಯುಂಟಾಗಿದೆ. id="toptextpromo">ಸ್ವಯಂ
ಪ್ರೇರಿತ ದೂರು ದಾಖಲಿಸಿಕೊಂಡಿರುವ ಸುಪ್ರೀಂ ಕೋರ್ಟ್, ಘಟನಾವಳಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ಕೋರ್ಟ್ ಗೆ ಒಪ್ಪಿಸುವಂತೆ ಗೃಹ ಸಚಿವಾಲಯ, ಬೇಹುಗಾರಿಕೆ ಸಂಸ್ಥೆ ಮತ್ತು ದೆಹಲಿ ಪೊಲೀಸರಿಗೆ ಸೂಚಿಸಿದೆ. ಇದೇ ವೇಳೆ, ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿರುವುದಕ್ಕೆ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹರ್ಷ ವ್ಯಕ್ತಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರಾಮಲೀಲಾ
ಮೈದಾನದಲ್ಲಿ ಶನಿವಾರ ರಾತ್ರಿ ನಡೆದ ಪೊಲೀಸರ ಅಮಾನವೀಯ ಕೃತ್ಯಗಳು ಮತ್ತು ರಾಮದೇವ್ ಅವರನ್ನು ಹೊರದಬ್ಬಿದ ಘಟನೆಗೆ ಸಂಬಂಧಿಸಿದಂತೆ ಶ್ವೇತ ಪತ್ರ ಹೊರಡಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಿಸಬೇಕು ಎಂದು ಅಜಯ್ ಅಗರವಾಲ್ ಎಂಬ ವಕೀಲರು ಭಾನುವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.











Click it and Unblock the Notifications