ಭಟ್ಕಳದಲ್ಲಿ ಮಂಗಗಳಿಂದ ಗಲಭೆ, ಜನರಿಂದ ಪ್ರತಿಭಟನೆ

ಆಲ್ತಾಫ್ ಹುಸೈನ್ ಅಶ್ರಫ್(17 ಮತ್ತು ಮೊಹಮ್ಮದ್ ರಿಯಾಝ್ ಇಸ್ಮಾಯಿಲ್ ಎಂಬಿಬ್ಬರನ್ನು ಮಂಗಗಳು ಗಾಯಗೊಳಿಸಿವೆ. ಮೊನ್ನೆ ಗುರುವಾರ ಕೂಡ ಮೂವರು ಮಕ್ಕಳನ್ನು ಮಂಗಗಳು ಗಾಯಗೊಳಿಸಿದ್ದವು. ಗಾಯಗೊಂಡ ಕೆಲವರು ಭಟ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಲ್ಲಿವರೆಗೆ ಹನ್ನೆರಡಕ್ಕೂ ಹೆಚ್ಚು ಜನರನ್ನು ಮಂಗಗಳು ಗಾಯಗೊಳಿಸಿವೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಮಂಗಗಳ ಉಪಟಳ ತಡೆಯಲಾಗದ ಕಾಲೋನಿ ಜನರು ಅರಣ್ಯ ಇಲಾಖೆಯ ವಿರುದ್ಧ ಕುಪಿತಗೊಂಡಿದ್ದಾರೆ.
ಮಕ್ಕಳನ್ನು ಗಾಯಗೊಳಿಸುವ ಮಂಗಗಳಿಂದ ರೋಸಿರುವ ಅಲ್ಲಿನ ಜನರು ಸೀದಾ ಪೊಲೀಸ್ ಸ್ಟೇಷನ್ ಗೆ ಹೋಗಿ ಪ್ರಕರಣ ದಾಖಲಿಸಲು ಯತ್ನಿಸಿದ್ದಾರೆ. ಆದರೆ ಮಂಗಗಳ ವಿರುದ್ಧ ಕ್ರಮ ಕೈಗೊಳ್ಳುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಸಮಸ್ಯೆ ಅರಣ್ಯ ಇಲಾಖೆ ಪರಿಹರಿಸುತ್ತದೆ ಎಂದು ಪೊಲೀಸರು ಕೈ ಚೆಲ್ಲಿದ್ದಾರೆ.
ಈಗ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲು ಅಲ್ಲಿನ ಜನರು ಮುಂದಾಗಿದ್ದಾರೆ. ನಾಡಿಗಿಳಿದು ತೊಂದರೆ ನೀಡುವ ಮಂಗಗಳನ್ನು ಕಾಡಿಗೆ ಅಟ್ಟಲು ಕ್ರಮಕೈಗೊಂಡಿರುವುದಾಗಿ ಅರಣ್ಯ ಇಲಾಖೆ ಹೇಳಿದೆ.












Click it and Unblock the Notifications