ಕಾದಿರುವರು ಶ್ರೀರಾಮುಲು ಬಳ್ಳಾರಿಗೆ ಸುಷ್ಮಾ ಬರುವರೆಂದು

ಶನಿವಾರ ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತಾಯಿ, ನಮ್ಮ ದೇವರು ಸುಷ್ಮಾ ಸ್ವರಾಜ್ ಅವರು, ನಮ್ಮ ಹಾಗೂ ನಮ್ಮ ಮಿತ್ರರಾದ ರೆಡ್ಡಿ ಸಹೋದರರ ಕುರಿತು ಮಾತನಾಡಿದ ನಂತರ ನಾನು ಸಂಪರ್ಕಿಸಲು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದೆ ಎಂದು ಅವರು ಹೇಳಿದರು.
ಆದರೆ, ಆಗಸ್ಟ್ 12ರ ಶ್ರಾವಣ ಶುಕ್ರವಾರದಂದು ಬಳ್ಳಾರಿಯಲ್ಲಿ ನಡೆಯುವ ಉಚಿತ ಸಾಮೂಹಿಕ ವಿವಾಹದಲ್ಲಿ ತಪ್ಪದೇ ಪಾಲ್ಗೊಳ್ಳುತ್ತಾರೆ. ನಾನೇ ಖುದ್ಧಾಗಿ ದೆಹಲಿಗೆ ಹೋಗಿ ಅವರನ್ನು ಆಹ್ವಾನಿಸುತ್ತೇನೆ. ನಮ್ಮಿಂದ ಏನಾದರೂ ತಪ್ಪಾಗಿದ್ದಲ್ಲಿ ಕ್ಷಮಿಸಿ ಎಂದು ಕೇಳುತ್ತೇನೆ. ರಾಜಕೀಯದಲ್ಲಿ ಕೆಲವೊಮ್ಮೆ ತಿಳಿಯದೇ ತಪ್ಪುಗಳಾಗಿರುವುದು ಸಹಜ. ಕಾರಣ ಕ್ಷಮೆ ಕೋರುತ್ತೇನೆ ಎಂದರು.
ಪ್ರತಿ ವರ್ಷ ಶ್ರಾವಣ ಶುಕ್ರವಾರ ತಪ್ಪದೇ ಬಳ್ಳಾರಿಗೆ ಬರುತ್ತೇನೆ, ಮನೆಯ ಮಗಳಾಗಿ ಇಲ್ಲಿಯೇ ವರಮಹಾಲಕ್ಷ್ಮಿ ಪೂಜೆ ನಡೆಸುತ್ತೇನೆ ಎಂದು ಅವರು ಮಾತು ನೀಡಿರುವ ಹಿನ್ನೆಲೆಯಲ್ಲಿ ಅವರು ತಪ್ಪದೇ ಬಳ್ಳಾರಿಗೆ ಬರುತ್ತಾರೆ ಎನ್ನುವ ವಿಶ್ವಾಸ ನನ್ನದು ಎಂದು ಅವರು ಹೇಳದರು.












Click it and Unblock the Notifications