ಸಾನಿಯಾ ಜೋಡಿಗೆ ದಕ್ಕದ ಫ್ರೆಂಚ್ ಓಪನ್ ಕಿರೀಟ
ಪ್ಯಾರೀಸ್,
ಜೂನ್ 4: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ರಷ್ಯಾದ ಎಲೆನಾ ವೆಸ್ನಿನಾ ಜೋಡಿ ಮಹಿಳೆಯರ ವಿಭಾಗದ ಡಬಲ್ಸ್ ಪ್ರಶಸ್ತಿ ಸುತ್ತಿಯಲ್ಲಿ ಸೋಲುಂಡಿದೆ. ಶುಕ್ರವಾರ ನಡೆದ ಅಂತಿಮ ಹಣಾಹಣಿಯಲ್ಲಿ ಇದೇ ಮೊದಲ ಬಾರಿಗೆ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶ ಪಡೆದಿದ್ದ ಸಾನಿಯಾ-ವೆಸ್ನಿನಾ ಜೋಡಿ ಜೆಕ್ ನ ಹಚುಕೋವಾ ಹಾಗೂ ಲೂಸಿ ಹ್ರಾಡಿಕಾ ಅವರ ವಿರುದ್ಧ 6-4, 6-3 ನೇರ ಸೆಟ್‌ಗಳ ಅಂತರದಲ್ಲಿ ಮಣಿದಿದೆ. id="toptextpromo">2009ರಲ್ಲಿ
ಮಹೇಶ್ ಭೂಪತಿ ಜೊತೆಯಲ್ಲಿ ಆಡಿ ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿಯನ್ನು ಸಾನಿಯಾ ಗೆದ್ದಿದ್ದರು. ಸಾನಿಯಾ ಅವರ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಗೆಲ್ಲುವ ಕನಸು ಭಗ್ನವಾಗಿದೆ. ಸುಮಾರು 1 ಗಂಟೆ 22 ನಿಮಿಷ ನಡೆದ ಅಂತಿಮ ಹಣಾಹಣಿಯಲ್ಲಿ ಸಾನಿಯಾ ಹಾಗೂ ವೆಸ್ನಿನಾ ಜೋಡಿ ಅನಗತ್ಯ ಡಬಲ್ ಫಾಲ್ಟ್ ಗಳನ್ನು ಮಾಡಿ ಪಂದ್ಯವನ್ನು ಎದುರಾಳಿಗಳಿಗೆ ಬಿಟ್ಟು ಕೊಟ್ಟರು. id='are-slot-1' class='oiad oi-axt oiadv'> id='top-searched-articles'>ವಿಜೇತ
ಜೆಕ್ ಜೋಡಿಗೆ 330 ಯೂರೋ ಹಾಗೂ ಟ್ರೋಫಿ ಲಭಿಸಿತು. ರನ್ನರ್ ಅಪ್ ಆದ ಇಂಡೋ ರಷ್ಯಾ ಜೋಡಿಗೆ 165 ಯೂರೋ ನಗದು ಪ್ರಶಸ್ತಿ ಸಿಕ್ಕಿದೆ. ಫೈನಲ್ ಪಂದ್ಯ ಸೋತರೂ ಫ್ರೆಂಚ್ ಓಪನ್ ಅಂತಿಮ ಹಣಾಹಣಿ ತಲುಪಿದ ಸಾಧನೆಯನ್ನು ಸಾನಿಯಾ ಮೆರೆದಿದ್ದಾರೆ.











Click it and Unblock the Notifications