ಆಸ್ಕರ್ ಖರೀದಿ ಆರೋಪ : ರೆಹಮಾನ ಹರಾಜು
ಮುಂಬೈ,
ಮೇ 31: 'ಸ್ಲಂ ಡಾಗ್ ಮಿಲಿಯನೇರ್' ಚಿತ್ರದ ಸಂಗೀತಕ್ಕಾಗಿ ಎ.ಆರ್. ರೆಹಮಾನ್ ಗೆ ಆಸ್ಕರ್ ಪ್ರಶಸ್ತಿ ಪುರಸ್ಕೃತವಾಗಲಿಲ್ಲ. ಬದಲಿಗೆ ಅವರು ಅದನ್ನು ಖರೀದಿಸಿದ್ದು ಎಂದು ಖ್ಯಾತ ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಆರೋಪಿಸಿದ್ದಾರೆ. id="toptextpromo">ನಾಗಪುರದಲ್ಲಿ
ಸೋಮವಾರ (ಮೇ 30) ಈ ವಿಷಯ ತಿಳಿಸಿರುವ ಇಸ್ಮಾಯಿಲ್ 'ಆಸ್ಕರ್ ಪ್ರಶಸ್ತಿ ಸಿಗುವಂತಹ ಸಂಗೀತ ಆ ಚಿತ್ರದಲ್ಲಿ ಏನಿದೆ? ರೋಜಾ ಅಥವಾ ಬಾಂಬೆ ಚಿತ್ರಕ್ಕಾಗಿ ಆಸ್ಕರ್ ಸಿಕ್ಕಿದ್ದರೆ ಅದನ್ನು ಒಪ್ಪಿಕೊಳ್ಳಬಹುದಿತ್ತು. ಆದರೆ ಸ್ಲಂ ಡಾಗ್ ಮಿಲೆನಿಯರ್ ಚಿತ್ರದ ಸಂಗೀತದಲ್ಲಿ ಅಂತಹ ಯಾವುದೇ ವಿಶೇಷತೆಯೂ ಇಲ್ಲ. ಆ ಪ್ರಶಸ್ತಿ ಪಡೆಯುವ ಅರ್ಹತೆಯೂ ಆ ಚಿತ್ರದ ಸಂಗೀತಕ್ಕಿಲ್ಲ. ಆಸ್ಕರ್, ರೆಹಮಾನ್‌ಗೆ ಸಿಕ್ಕಿದ್ದಲ್ಲ. ಖರೀದಿಸಿದ್ದು' ಎಂದು ಆರೋಪಿಸಿದ್ದಾರೆ. ಅಲ್ಲದೆ ತಾವು ಪ್ರಚಾರಕ್ಕಾಗಿ ಈ ಆರೋಪ ಮಾಡುತ್ತಿಲ್ಲ ಎಂದೂ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆದರೆ
ಈ ಆರೋಪವನ್ನು ತಳ್ಳಿಹಾಕಿರುವ ಎ.ಆರ್. ರೆಹಮಾನ್, ಆಸ್ಕರ್ ಪ್ರಶಸ್ತಿಯನ್ನು ಯಾರೂ ಖರೀದಿಸಲು ಸಾಧ್ಯವಿಲ್ಲ. 3000 ಜನ ಸೇರಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಹೀಗಿರುವಾಗ ಪ್ರಶಸ್ತಿಯನ್ನು ಖರೀದಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.











Click it and Unblock the Notifications