ಮಳೆ ಬಂತು ಮಾರಾಯ, ಕೊಡೆ ಹಿಡಿಯೋ ಸುಬ್ರಾಯ

Karnataka Weather report
ಬೆಂಗಳೂರು, ಮೇ 31: ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮುಂದಿನ 48 ಗಂಟೆಗಳೊಳಗೆ ನೈರುತ್ಯ ಮಾರುತಗಳು ಬಂದಪ್ಪಳಿಸಲಿವೆ. ರಾಜ್ಯದ ಕೆಲವು ಕಡೆಗಳಲ್ಲಿ ಗಾಳಿಯಿಂದ ಕೂಡಿದ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತನ್ನ ಮಂಗಳವಾರದ ಹವಾಮಾನ ಪ್ರಕಟಣೆಯಲ್ಲಿ ತಿಳಿಸಿದೆ.

ಮುಂಗಾರು ಪೂರ್ವದ ಮಳೆ ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಬೀಳುವುದಕ್ಕೆ ಶುರುವಾಗಿದೆ. ಬೆಂಗಳೂರಿನ ಹಲವು ಸಂಜೆಗಳು ದೀರ್ಘ ಮಳೆಗೆ ಸಾಕ್ಷಿಯಾಗಿದೆ. ಸುಬ್ರಹ್ಮಣ್ಯ, ರಾಯಚೂರು ಮುಂತಾದೆಡೆ ಈಗಾಗಲೇ ಗರಿಷ್ಠ ಮಳೆ ದಾಖಲಾಗಿದೆ. ಹೀಗಾಗಿ ರಾಜ್ಯದ ಹಲವು ಕಡೆಗಳಲ್ಲಿ ಕೃಷಿಕರು ಈಗಾಗಲೇ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಕೆಲವು ಕಡೆ ಅಸಲಿ ಬಿತ್ತನೆ ಬೀಜದ ಕೊರತೆ ಆರಂಭವಾಗಿದೆ.

ಗಾಳಿ ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆ ಇರುವುದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಒಣ ಮೀನೇ ಸಾಕು. ಮುಂದಿನ 24 ಗಂಟೆಗಳಲ್ಲಿ ರಾಜ್ಯದತ್ತ ಗಂಟೆಗೆ 45ರಿಂದ 55 ಕಿ.ಮೀ. ವೇಗದಲ್ಲಿ ರಭಸದ ಗಾಳಿ ಬೀಸಲಿದೆ.

ಕೇರಳಕ್ಕೆ ನೈರುತ್ಯ ಮಾರುತಗಳು ನಿನ್ನೇನೇ ಬಂತು. ಎರಡು ದಿನದೊಳಗೆ ಕರ್ನಾಟಕವನ್ನೂ ಚುಂಬಿಸಲಿವೆ. 2010 ರಲ್ಲಿ ರಾಜ್ಯದಲ್ಲಿ 890 ಮಿ.ಮೀ. ಮಳೆಯಾಗಿದೆ. ಈ ಬಾರಿ ಸುಮಾರು 800 ಮಿ.ಮೀ. ಸರಾಸರಿ ಮಳೆಯಾಗುವ ಸಂಭವವಿದೆ. ಅಂದರೆ 90 ಮೀಮೀ ಖೋತಾ ಬಜೆಟ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+