ಭಾರತ-ಜರ್ಮನಿ ಒಪ್ಪಂದ: ಉಗ್ರರ ದಮನಕ್ಕೆ ಒಮ್ಮತ

ಶಿಕ್ಷಣ, ವೈದ್ಯಕೀಯ ಸಂಶೋಧನೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಸಹಕಾರ ನೀಡುವ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.
ಆದಾಗ್ಯೂ ಮನಮೋಹನ ಸಿಂಗ್ ಮತ್ತು ಮರ್ಕೆಲ್ ಇಬ್ಬರೂ ತಮ್ಮ ಪ್ರಮುಖ ಆದ್ಯತೆ ಉಗ್ರರ ದಮನವೆಂದು ಒತ್ತಿ ಹೇಳಿದ್ದಾರೆ. "ಉಗ್ರರ ವಿರುದ್ಧ ಎಲ್ಲರೂ ಒಂದಾಗಿ ಹೋರಾಡಬೇಕಿದೆ" ಎಂದು ಸಿಂಗ್ ಹೇಳಿದ್ದಾರೆ. ಇವರಿಬ್ಬರೂ ರಾಷ್ಟ್ರೀಯ ಭದ್ರತಾ ಒಕ್ಕೂಟ (ಯುಎನ್ಎಸ್ಸಿ) ಕುರಿತು "ಯುಎನ್ಎಸ್ಸಿ ಇನ್ನಷ್ಟು ಸುಧಾರಿಸಬೇಕಿದೆ" ಎಂದಿದ್ದಾರೆ.
"ನಾವು ದಕ್ಷಿಣ ಮತ್ತು ಪಶ್ಚಿಮ ಏಷ್ಯಾ ಮತ್ತು ಭಯೋತ್ಪಾದನೆ ಕುರಿತು ಚರ್ಚಿಸಿರುವುದಾಗಿ" ಮನಮೋಹನ್ ಸಿಂಗ್ ಹೇಳಿದರು. ಅಂಗೆಲಾ ನಾಯಕತ್ವವನ್ನು ನಾನು ಯಾವತ್ತೂ ಮೆಚ್ಚುತ್ತೇನೆ ಎಂದು ಶ್ಲಾಘಿಸಲು ಸಿಂಗ್ ಮರೆಯಲಿಲ್ಲ.












Click it and Unblock the Notifications