ನಕಲಿ ಪ್ರಮಾಣಪತ್ರ ನೀಡದ್ದಕ್ಕೆ ವೈದ್ಯರನ್ನೇ ಕೊಂದ ಕೈದಿಗಳು

Prisoners of Bihar jail kill doctor
ಬಿಹಾರ, ಮೇ 30: ನಕಲಿ ಪ್ರಮಾಣಪತ್ರ ನೀಡಲಿಲ್ಲವೆಂದು ಸಿಟ್ಟುಗೆದ್ದ ಇಲ್ಲಿನ ಗೋಪಾಲಗಂಜ್ ಜೈಲಿನ ಕೈದಿಗಳು ಜೈಲಿನ ವೈದ್ಯರನ್ನು ಭಾನುವಾರ ಮಧ್ಯಾಹ್ನ ಹೊಡೆದೊಡೆದು ಸಾಯಿಸಿದ್ದಾರೆ.

ಅನಾರೋಗ್ಯ ಪೀಡಿತ ಕೈದಿಯೊಬ್ಬನಿಗೆ ಚಿಕಿತ್ಸೆ ನೀಡಲು ಡಾ. ಬಿ.ಡಿ. ಸಿಂಗ್ ಜೈಲಿಗೆ ತೆರಳಿದ್ದರು. ಜೈಲಿನ ಆವರಣದೊಳಕ್ಕೆ ಡಾ. ಸಿಂಗ್ ಬರುತ್ತಿದ್ದಂತೆ ಮೆಟ್ಟಿಲುಗಳಿಂದ ಅವರನ್ನು ಕೆಳಕ್ಕೆ ತಳ್ಳಿದ್ದ ಕೈದಿಗಳ ಗುಂಪೊಂದು ಮನಸೋಇಚ್ಛೆ ಥಳಿಸಿದೆ. ತಕ್ಷಣ ವೈದ್ಯರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತಾದರೂ ಮಾರ್ಗ ಮಧ್ಯೆ ಅವರು ಅಸುನೀಗಿದರು.

ಅಪಹರಣ ಪ್ರಕರಣವೊಂದರಲ್ಲಿ ಇತ್ತೀಚೆಗೆ ಜೀವಾವಧಿ ಶಿಕ್ಷೆಗೊಳಗಾದ ರಂಜನ್ ಯಾದವ್ ಎಂಬ ಕೈದಿ ಹಲ್ಲೆಯ ನೇತೃತ್ವ ವಹಿಸಿದ್ದ ಎಂದು ಆರೋಪಿಸಲಾಗಿದೆ. ಮತ್ತೊಂದು (ಬಕ್ಸಾರ್) ಜೈಲಿಗೆ ಸ್ಥಳಾಂತರಗೊಳ್ಳುವುದನ್ನು ಬಯಸದ ಯಾದವ್ ಹಾಗೂ ಮತ್ತೊಬ್ಬ ಕೈದಿ ಡಾ. ಸಿಂಗ್ ರನ್ನು ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡುವಂತೆ ಕೇಳಿದ್ದರು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಕ್ಷಣವೇ ಘಟನೆಯ ಬಗ್ಗೆ ತನಿಖೆಗೆ ಆಜ್ಞಾಪಿಸಿದ್ದಾರೆ. ಆದರೆ ರಾಜ್ಯದ ನಾನಾ ಭಾಗಗಳಲ್ಲಿ ವೈದ್ಯರು ಮುಷ್ಕರ ನಡೆಸುವ ಬೆದರಿಕೆಯೊಡ್ಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+