ಪೇಸ್-ಭೂಪತಿಗೆ ಸರ್ಕಾರದಿಂದ ಮಾಸಿಕ 6 ಲಕ್ಷ ರು. ನೆರವು
ಹೊಸದಿಲ್ಲಿ,
ಮೇ 29: ಲಂಡನ್ ಒಲಿಂಪಿಕ್ಸ್‌ಗೆ (2012) ಸಿದ್ಧತೆ ನಡೆಸುವ ಸಲುವಾಗಿ ಕೇಂದ್ರ ಕ್ರೀಡಾ ಸಚಿವಾಲಯ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಅವರಿಗೆ ತಲಾ 6,000 ಡಾಲರ್ (ಅಂದಾಜು 6 ಲಕ್ಷ ರು.) ಮಾಸಿಕ ನೆರವು ನೀಡಲು ನಿರ್ಧರಿಸಿದೆ. id="toptextpromo">ಲಂಡನ್
ಒಲಿಂಪಿಕ್ಸ್‌ನ ಟೆನಿಸ್ ಡಬಲ್ಸ್‌ನಲ್ಲಿ ಭಾರತಕ್ಕೆ ಪದಕ ಭರವಸೆ ಎನಿಸಿರುವ ಲಿಯಾಂಡರ್ ಪೇಸ್ ಮತ್ತು ಕರ್ನಾಟಕದ ಮಹೇಶ್ ಭೂಪತಿ ಒಲಿಂಪಿಕ್ಸ್ ಗೆ ತಯಾರಿ ನಡೆಸುವ ಸಲುವಾಗಿ ಆರ್ಥಿಕ ಸಹಾಯ ಮಾಡುವಂತೆ ಸರ್ಕಾರವನ್ನು ಕೋರಿದ್ದರು. ಅವರ ಪರವಾಗಿ ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಸಹ ಮನವಿ ಮಾಡಿತ್ತು. ಅದಕ್ಕೆ ಸಚಿವಾಲಯ ಕೂಡಲೇ ಸ್ಪಂದಿಸಿದೆ. id='are-slot-1' class='oiad oi-axt oiadv'> id='top-searched-articles'>ಎಐಟಿಎ
ಇನ್ನಿಬ್ಬರು ಟೆನಿಸ್ ಆಟಗಾರರಾದ ಕರಣ್ ರಸ್ತೋಗಿ ಮತ್ತು ವಿಷ್ಣುವರ್ಧನ್ ಅವರಿಗೂ ಆರ್ಥಿಕ ನೆರವು ಕೋರಿತ್ತಾದರೂ, ಸಚಿವಾಲಯ ಆ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.











Click it and Unblock the Notifications