ಕರ್ನಾಟಕ ಸಚಿವರು, ಕಾರ್ಯದರ್ಶಿಗೆ ಬ್ಲಾಕ್‌ಬೆರಿ ಮೊಬೈಲ್
ಬೆಂಗಳೂರು,
ಮೇ 27: ರಾಜಕೀಯ ಗೊಂದಲಗಳ ನೆಪದಲ್ಲಿ ಅಭಿವೃದ್ಧಿ ಕಡೆಗಣಿಸಿರುವ ಕೆಲ ಸಚಿವರ ವಿರುದ್ಧ ಕೆಂಡಾಮಂಡಲಗೊಂಡ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇನ್ನು ಮುಂದೆ ಸಚಿವರ ಕಾರ್ಯವೈಖರಿ ಬಗ್ಗೆ ಖುದ್ದು ನಿಗಾವಹಿಸುವೆ. ಕೊರತೆ ಕಂಡು ಬಂದರೆ ಕ್ರಮಕ್ಕೂ ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. id="toptextpromo">ಜತೆಗೆ,
ಇನ್ನಾದರೂ ವಿಳಂಬ ಮಾಡದೇ ಇಲಾಖೆಯ ಕಾರ್ಯಗಳನ್ನು ಮಾಡುವಂತೆ ಪ್ರೋತ್ಸಾಹ ನೀಡಲು ಬ್ಲಾಕ್‌ಬೆರಿ ಮೊಬೈಲ್ ಸೆಟ್‌ಗಳನ್ನು ಎಲ್ಲಾ ಸಚಿವರು ಹಾಗೂ ಕಾರ್ಯದರ್ಶಿ ಮಟ್ಟದ ಅಧಿಕಾರಗಳಿಗೆ ನೀಡಲು ಒಪ್ಪಿಗೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಗುರುವಾರ
(ಮೇ 26) ನಡೆದ ಸಚಿವ ಸಂಪುಟ ಸಭೆ ಈ ಎರಡು ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಒಂದು ಹಂತದಲ್ಲಿ ಸಚಿವರಿಗೆ ಬ್ಲಾಕ್‌ಬೆರಿ ಮೊಬೈಲ್ ಸೆಟ್ ನೀಡುವ ಪ್ರಸ್ತಾಪ ಅಂಗೀಕರಿಸಿ ಖುಷಿ ನೀಡಿದ ಮುಖ್ಯಮಂತ್ರಿಯವರು ಇನ್ನು ಮುಂದೆ ಸಮರ್ಪಕವಾಗಿ ಕಾರ್ಯ ನಿರ್ವಹಿಸದಿದ್ದರೆ ಮುಂದಿನ ಬೆಳವಣಿಗೆಗೆ ನಾನು ಹೊಣೆಯಲ್ಲ ಎಂಬ ಎಚ್ಚರಿಕೆಯನ್ನು ನೀಡಿದರು ಎಂದು ತಿಳಿದು ಬಂದಿದೆ.











Click it and Unblock the Notifications