ಉಡುಪಿ ಜಿಲ್ಲಾಧಿಕಾರಿ ಡಾ.ಎಂ.ಟಿ.ರೆಜು ಅಧಿಕಾರ ಸ್ವೀಕಾರ

ಇದುವರೆಗೆ ಪ್ರಭಾಕರ ಅವರು ಪ್ರಭಾರ ಜಿಲ್ಲಾಧಿಕಾರಿಯಾಗಿ ಉಡುಪಿ ಜಿಲ್ಲಾಡಳಿತ ನಡೆಸುತ್ತಿದ್ದರು. ಈ ಹಿಂದೆ, ಉಡುಪಿಯ ಜಿಲ್ಲಾಧಿಕಾರಿಯಾಗಿದ್ದ ಪಿ. ಹೇಮಲತಾ ಅವರು ತೋಟಗಾರಿಕೆ ಇಲಾಖೆಯ ನಿರ್ದೇಶಕರಾಗಿ ಬೆಂಗಳೂರಿಗೆ ವರ್ಗಗೊಂಡಿದ್ದಾರೆ. ರೆಜು ಮೇ 13ರಂದು ಇಲ್ಲಿಗೆ ನಿಯುಕ್ತಗೊಂಡಿದ್ದರು.
ರೆಜು, 2007-09ರ ವರೆಗೆ ತರಿಕೇರಿಯಲ್ಲಿ ಸಹಾಯಕ ಕಮಿಷನರ್ ಆಗಿದ್ದರು. 2009 ರಿಂದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಇದೀಗ ಉಡುಪಿ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಅಧಿಕಾರ ಸ್ವೀಕರಿಸಿದ್ದಾರೆ.
ಉತ್ತಮ ಆಡಳಿತ ನೀಡುವುದು. ಜಿಲ್ಲೆಯಲ್ಲಿ ಉದ್ಯಾನವನಗಳ ಸಂಖ್ಯೆಯನ್ನು ಹೆಚ್ಚಿಸುವುದು. ಜಿಲ್ಲಾಧಿಕಾರಿ ಸಂಕೀರ್ಣವನ್ನು ಶೀಘ್ರವೇ ಮಣಿಪಾಲಕ್ಕೆ ಸ್ಥಳಾಂತರಿಸುವುದು ತಮ್ಮಆದ್ಯತೆಗಳಾಗಿವೆ ಎಂದು ಅವರು ಹೇಳಿದರು.












Click it and Unblock the Notifications