ಮತಾಂತರದಿಂದ ದಲಿತರಿಗೆ ಪ್ರಯೋಜನವಿಲ್ಲ : ಪೇಜಾವರಶ್ರೀ

Pejavar Sri Vishvesha Teertha Swamiji
ಉಡುಪಿ, ಮೇ 24 : "ದಲಿತರು ಇಸ್ಲಾಂ ಅಥವಾ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವುದಕ್ಕಿಂದ ಬೌದ್ಧ ಧರ್ಮಕ್ಕೆ ಮತಾಂತರವಾಗುವುದು ಉತ್ತಮ. ಏಕೆಂದರೆ, ಬೌದ್ಧ ಧರ್ಮ ಕೂಡ ಹಿಂದೂವಿನ ಒಂದು ಭಾಗವೆ. ಆದರೆ, ಈ ಮತಾಂತರದಿಂದ ದಲಿತರಿಗೆ ಯಾವುದೇ ಯಾಭವಾಗುವುದಿಲ್ಲ."

ಇಂದು ಬನ್ನಂಜೆಯಲ್ಲಿ ಬೌದ್ಧ ಧರ್ಮಕ್ಕೆ ಮತಾಂತರವಾಗುತ್ತಿರುವ 2,000 ದಲಿತರಿಗೆ ಪೇಜವಾರ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿಯವರು ಹೇಳಿದ ಕಿವಿಮಾತುಗಳಿವು. ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್) ಈ ಮತಾಂತರ ಕಾರ್ಯಕ್ರಮವನ್ನು ಮೇ 24ರಂದು ಆಯೋಜಿಸಿದೆ.

ಮತಾಂತರವಾದರೆ ಕಾಲಾಂತರದಿಂದ ಬಂದ ದಲಿತ ಸಂಸ್ಕೃತಿಯೇ ನಾಶವಾಗುತ್ತದೆ. ಇದರಿಂದ ಅಸ್ಪೃಶ್ಯತೆಯೂ ನಿವಾರಣೆಯಾಗುವುದಿಲ್ಲ. ಮತ್ತು ಅನಾದಿ ಕಾಲದಿಂದ ಪೂಜಿಸಿಕೊಂಡು ಬಂದಿರುವ ದೇವರು, ದೇವತೆಗಳನ್ನೆಲ್ಲ ಬಿಡಬೇಕಾಗುತ್ತದೆ ಎಂದು ಪೇಜಾವರಶ್ರೀ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದಲಿತರಿಗೆ ಭಕ್ತಿ ದೀಕ್ಷೆ ಅಥವಾ ವೈಷ್ಣವ ದೀಕ್ಷೆಯನ್ನು ನೀಡಲು ತಾವು ಈಗಲೂ ಸಿದ್ಧ. ಇದರಿಂದ ದಲಿತರಿಗೆ ಖಂಡಿತ ಒಳಿತಾಗುತ್ತದೆ. ಇದಕ್ಕೆ ಹೆಚ್ಚೇನು ಮಾಡಬೇಕಾಗಿಲ್ಲ. ಮಾಂಸ ಮತ್ತು ಮದ್ಯ ಸೇವನೆಯನ್ನು ತ್ಯಜಿಸಿದರೆ ಸಾಕು ಎಂದು ವಿಶ್ವೇಶತೀರ್ಥರು ಹೇಳಿದ್ದಾರೆ.

ವೈಷ್ಣವ ದೀಕ್ಷೆ ಸ್ವೀಕರಿಸಲು ಇಚ್ಛೆಯುಳ್ಳವರು : ಮ್ಯಾನೇಜರ್, ಶ್ರೀ ವಿಜಯಧ್ವಜ ಮಂದಿರ, ಪೇಜಾವರ ಮಠ, ಉಡುಪಿ - ಇಲ್ಲಿ ಸಂಪರ್ಕಿಸಬೇಕು. ದಿನಾಂಕವನ್ನು ದೀಕ್ಷೆ ಸ್ವೀಕಾರ ಸಮಾರಂಭಕ್ಕಾಗಿ ನಿಗದಿಪಡಿಸಲಾಗುವುದು ಎಂದು ಶ್ರೀಗಳು ದಲಿತರನ್ನು ಕೋರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+