ಸೊಸೆ ತಂದ ದೌರ್ಭಾಗ್ಯ; ನೇಣಿಗೆ ಶರಣಾದ ಅತ್ತೆ
ಬೆಂಗಳೂರು,
ಮೇ.21: ಇದನ್ನು ಸೊಸೆ ತಂದ ಸೌಭಾಗ್ಯ ಅನ್ನಿ ಅಥವಾ ದೌರ್ಭಾಗ್ಯ ಅನ್ನಿ. ಒಟ್ಟಿನಲ್ಲಿ ಸೊಸೆ ಆಯ್ಕೆಗೆ ದಂಪತಿಗಳ ನಡುವೆ ಜಗಳ ನಡೆದು ಕಡೆಗೆ ಪತ್ನಿ ನೇಣಿಗೆ ಶರಣಾದ ಘಟನೆ ಮಡಿವಾಳದಲ್ಲಿ ನಡೆದಿದೆ. ತನ್ನ ಮಗನಿಗೆ ಮದುವೆ ಮಾಡಲು ಅಪ್ಪ ಒಂದು ಹುಡುಗಿಯನ್ನು ನೋಡಿದ್ದ, ಆ ಹುಡುಗಿ ಬೇಡ ಎಂದು ತಾಯಿ ಮತ್ತೊಬ್ಬ ಹುಡುಗಿಯನ್ನು ನೋಡಿದ್ದರು. id="toptextpromo">ಈ
ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು ಕೊನೆಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂಬಿಕಾ (50) ಎಂಬಾಕೆಯೇ ನೇಣಿಗೆ ಶರಣಾದವರು. ಈಕೆಯ ಪತಿ ಗಂಗಾಧರಯ್ಯ ಬಿಎಂಟಿಸಿ ನೌಕರ. ಇವರು ತಮ್ಮ ಪುತ್ರ ಜಯಶಂಕರ್‌ಗೆ ಬೇರೊಂದು ಸಂಬಂಧವನ್ನು ನೋಡಿದ್ದರು. id='are-slot-1' class='oiad oi-axt oiadv'> id='top-searched-articles'>ಈ
ವಿಚಾರವಾಗಿ ದಂಪತಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಕಡೆಗೆ ಪತಿಯ ಮೇಲೆ ಕೋಪಗೊಂಡ ಅಂಬಿಕಾ ನೇಣಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಗನ ಮದುವೆ ನಿಶ್ಚರ್ಯವಾಗಿದ್ದು, ಮೂರು ದಿನಗಳಲ್ಲಿ ಮಗನ ಮದುವೆ ನಡೆಯಬೇಕಿತ್ತು. ಮೃತರು ದೊಡ್ಡಕ್ಕನಹಳ್ಳಿಯಲ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. (ದಟ್ಸ್‌ಕನ್ನಡ ವಾರ್ತೆ)











Click it and Unblock the Notifications