ಈ ಹೆಣ್ಣು ಮಗುವನ್ನು Like ಮಾಡದವರು ಯಾರವ್ರೆ?

ಇತ್ತೀಚೆಗೆ ಇಸ್ರೆಲ್ ರಾಜಧಾನಿ ಟೆಲ್ ಅವಿಲ್ ನಗರದಲ್ಲಿ ವಾಸಿಸುತ್ತಿರುವ ಲಿಯೋರ್ ಆಡ್ಲೆರ್ ಪತ್ನಿ ವರ್ಡಿಟ್ ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮಗುವಿಗೆ ಹೆಸರಿಡುವ ಕುರಿತು ಅವರು ತುಂಬಾ ತಲೆಕೆಡಿಸಿಕೊಂಡರು. ಯಾವ ಹೆಸರುಗಳು ಅವರಿಗೆ ಇಷ್ಟವಾಗಲಿಲ್ಲ. ಈ ಜಮಾನಕ್ಕೆ ಸೂಕ್ತವಾದ ಆಧುನಿಕ ಮತ್ತು ಆಕರ್ಷಕ ಹೆಸರಿಗಾಗಿ ಹುಡುಕಾಡುತ್ತಿದ್ದರು. ಆಗ ಅವರ ಕಣ್ಣಿಗೆ ಬಿದ್ದದ್ದು ಫೇಸ್ ಬುಕ್ Like ಬಟನ್. ಇದಕ್ಕಿಂತ ಮಾಡರ್ನ್ ಹೆಸರು ಇನ್ಯಾವುದಿದೆ ಅಂತ ಅನಿಸಿದ್ದೇ ತಡ ಶುಭ ಮಹೂರ್ತದಲ್ಲಿ ಮಗಳಿಗೆ Like ಎಂದು ನಾಮಕರಣ ಮಾಡಿದ್ದಾರೆ.
"ಆಧುನಿಕ ಯುಗದಲ್ಲಿ ಲವ್ ಎಂಬ ಪದಕ್ಕೆ ಸಮಾನವಾಗಿ Like ಬಳಕೆಯಾಗುತ್ತಿದೆ. ಹೀಗಾಗಿ ನಮ್ಮ ಮುದ್ದಿನ ಮಗಳಿಗೆ ಪ್ರೀತಿಯಿಂದ Like ಅಂತ ಹೆಸರಿಟ್ಟಿದ್ದೇವೆ" ಎಂದು ದಂಪತಿಗಳ ಹೇಳಿಕೆಯನ್ನು ಡೈಲಿ ಮೈಲ್ ವರದಿ ಮಾಡಿದೆ. ಇಸ್ರೆಲ್ ನಲ್ಲಿ ಹೆಣ್ಣು ಮಕ್ಕಳಿಗೆ ಹೆಚ್ಚು ಜನಪ್ರಿಯ ಹೆಸರುಗಳೆಂದರೆ ನೊವಾ, ಮಾಯಾ ಮತ್ತು ತಮರ್ ಎಂಬುದಾಗಿದೆ.
Llike ಹೆತ್ತವರಿಗೆ ಮಕ್ಕಳಿಗೆ ಹೆಸರಿಡುವ ಕ್ರೇಝ್ ಇದು ಮೊದಲಲ್ಲ. ಒಂದು ಮಗಳಿಗೆ ಇಂಗ್ಲಿಷ್ ಆಹಾರ Pie ಎಂದು ಹೆಸರಿಟ್ಟಿದ್ದಾರೆ. ಮತ್ತೊಂದು ಮಗುವಿಗೆ ಜೇನು ಹುಳದ ಸದ್ದು Vash ಎಂದು ಹೆಸರಿಟ್ಟಿದ್ದಾರೆ. ಆಡ್ಲರ್ ತನ್ನ ಮುದ್ದು ಮಗಳ ಭಾವಚಿತ್ರದೊಂದಿಗೆ ಫೇಸ್ ಬುಕ್ ನಲ್ಲಿ ಮಗುವಿನ ಹೆಸರು Like ಎಂದು ಪ್ರಕಟಿಸಿದಾಗ ಸುಮಾರು 40 ಪರಿಚಿತರು like ಮಾಡಿದ್ದಾರಂತೆ. [ದಟ್ಸ್ ಕನ್ನಡ ಫ್ಯಾನ್ ಕ್ಲಬ್ Like ಮಾಡಿರಿ ]
ಆಡ್ಲರ್ ನ ಫೇಸ್ ಬುಕ್ ಖಾತೆಯಲ್ಲಿ ಸುಮಾರು 100 ಜನ ಸದಸ್ಯರಿರುವುದರಿಂದ 40 ಜನ Like ಮಾಡಿದ್ದು ಹೆಚ್ಚು. ಆದರೆ ಮಗಳ ಹೆಸರು like ಅಂದಾಗ ಹೆಚ್ಚಿನವರು ನಂಬೋದಿಲ್ಲ, ಸುಳ್ಳು ಹೇಳ್ತಾ ಇದ್ದಿ ಅಂದ್ರಂತೆ. ಕೊನೆಗೆ ಇದೇ ನಿಜ ಅಂದಾಗ ಎಲ್ಲರೂ Like ಮಾಡತೊಡಗಿದರು. ಅಂದಹಾಗೇ ಈ ಹೆಸರು ನಿಮಗೆ Like ಆಯ್ತಾ. ದಯವಿಟ್ಟು Unlike ಮಾಡಬೇಡಿ. ಪುಟಾಣಿ Likeಗೆ ಬೇಸರವಾದೀತು.












Click it and Unblock the Notifications