ಜಯಲಲಿತಾರತ್ತ ಕೈಚಾಚಿದ ಸೋನಿಯಾ; ಡಿಎಂಕೆಗೆ ಕೊಕ್?

ಜತೆಗೆ ಅವರನ್ನು ಚಹಾ ಕೂಟಕ್ಕಾಗಿ ನವದೆಹಲಿಗೆ ಬರುವಂತೆಯೂ ಆಮಂತ್ರಣ ನೀಡಿದ್ದಾರೆ. ಇದು ಹೊಸ ಸ್ನೇಹದ ಸಂಕೇತವಾ ಎಂಬುದು ಕುತೂಹಲಕ್ಕೆ ಎಡೆಮಾಡಿದೆ. ಏಕೆಂದರೆ ಸೋನಿಯಾ ಗೆದ್ದ ನಾಯಕರನ್ನೆಲ್ಲ 'ರಾಜಧಾನಿ ಚಹಾ'ಗೆ ಆಹ್ವಾನಿಸಿಲ್ಲ.
ಹಳೆಯದನ್ನೆಲ್ಲ ಮರೆತು ಹೊಸ ಜೀವನ ಆರಂಭಿಸೋಣ ಎಂದು ಸೋನಿಯಾ 'ಕೈ'ಚಾಚಿದ್ದಾರೆ. ಶುಕ್ರವಾರ ಜಯ ಸಾಧಿಸುತ್ತಿದ್ದಂತೆ ಪ್ರಧಾನಿ ಸಿಂಗ್ ಅವರು ಜಯಲಿತಾ ಅವರಿಗೆ ಶುಭಾಶಯ ಕೋರಿದ್ದರು. 2001ರ ಚುನಾವಣೆ ಬಳಿಕ ಕಾಂಗ್ರೆಸ್ ಮತ್ತು ಅಣ್ಣಾ ಡಿಎಂಕೆ ದೂರವಾಗಿದ್ದವು.
2ಜಿ ಕಳಂಕದಲ್ಲಿ ಕಂಠಮಟ್ಟ ಮುಳುಗಿರುವ ಡಿಎಂಕೆಯಿಂದ ದೂರವಾಗಲು ಸೋನಿಯಾ ಕಂಡುಕೊಂಡಿರುವ ಹೊಸ ದಾರಿ ಇದಾಗಿದೆ ಎನ್ನಬಹುದು. ಸಂಸತ್ತಿನಲ್ಲಿ ರಾಡಿ ಎಬ್ಬಿಸಿ, ಸುಗಮ ಕಲಾಪಕ್ಕೆ ಧಕ್ಕೆ ತಂದಿದ್ದ 2 ಜಿ ಹಗರಣದಿಂದಾಗಿ ಡಿಎಂಕೆಯಿಂದ ದೂರವಾಗುವ ಬಗ್ಗೆ ಕಾಂಗ್ರೆಸ್ ಈಗ ಗಂಭೀರವಾಗಿ ಯೋಚಿಸುತ್ತಿದೆ.
ಈ ಮಧ್ಯೆ, ಇದೊಂದು ಉಭಯಕುಶಲೋಪರಿ ಭೇಟಿಯಾಗಬಹುದು ಎಂದು ಜಯಂತಿ ನಟರಾಜ್ ಹೇಳಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಇಂತಹ ಬೆಳವಣಿಗೆಯನ್ನೇ ಎದುರು ನೋಡುತ್ತಿತ್ತು. 2014ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು, ಎಐಎಡಿಎಂಕೆ ಮತ್ತು ಕಾಂಗ್ರೆಸ್ ಈಗಿಂದೀಗಲೇ ಒಂದುಗೂಡುವುದು ಉತ್ತಮ ಬೆಳವಣಿಗೆಯಾದೀತು ಎಂದು ಭವಿಷ್ಯದ ಕುರಿತು ಲೆಕ್ಕಾಚಾರ ಹಾಕುತ್ತಿರುವ ಮೂಲಗಳು ತಿಳಿಸಿವೆ.












Click it and Unblock the Notifications