34 ವರ್ಷಗಳ ಎಡ ಆಡಳಿತಕ್ಕೆ ಕೊನೆ ಹಾಡಿದ ದೀದಿ

ಇದನ್ನೂ ಓದಿ : ಕರ್ನಾಟಕ ಉಪಚುನಾವಣೆ ಫಲಿತಾಂಶ
ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ 294ರಲ್ಲಿ 215 ಕ್ಷೇತ್ರಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಕಳೆದ ಚುನಾವಣೆಗಿಂತ 164ಕ್ಕೂ ಹೆಚ್ಚು ಕ್ಷೇತ್ರಗಳನ್ನು ಕಬಳಿಸುವತ್ತ ಸಾಗಿದೆ. ಭಾರೀ ಮುಖಭಂಗ ಅನುಭವಿಸಿರುವ ಎಡಪಕ್ಷಗಳು ಕೇವಲ 69 ಸೀಟುಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿವೆ. ಸೋಲೊಪ್ಪಿಕೊಂಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಇಂದು ಮಧ್ಯಾಹ್ನ 2 ಗಂಟೆಗೆ ರಾಜೀನಾಮೆ ನೀಡಲಿದ್ದಾರೆ.
ಎರಡು ದಶಕಗಳ ಕಾಲ ಮಮತಾ ಬ್ಯಾನರ್ಜಿ ನಡೆಸಿದ ಹೋರಾಟಕ್ಕೆ ಈಗ ಪ್ರತಿಫಲ ದೊರೆಯುತ್ತಿದೆ. ಸಿಂಗೂರಿನಲ್ಲಿ ರೈತರಿಗಾಗಿ ಮಮತಾ ಏಕಾಂಗಿಯಾಗಿ ನಡೆಸಿದ ಹೋರಾಟ ಈ ಅದ್ಭುತ ಜಯಕ್ಕೆ ನಾಂದಿ ಹಾಡಿದೆ. ಜಯಭೇರಿ ಬಾರಿಸಿದ ನಂತರ ಮತದಾರರನ್ನುದ್ದೇಶಿಸಿ ಮಾತನಾಡಿದ ಮಮತಾ, ಗೆಲುವುದ ತಂದುಕೊಟ್ಟಿದ್ದಕ್ಕಾಗಿ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಮತ್ತು ಯಾವುದೇ ಉದ್ರೇಕಕರ ಮಾತುಗಳಿಗೆ ಕಿವಿಯಾಗದೆ, ಸಂಯಮದಿಂದ ವರ್ತಿಸುವಂತೆ ಮನವಿ ಮಾಡಿದ್ದಾರೆ.
ಮ್ಯಾಜಿಕ್ ನಂಬರಾದ 148 ಸೀಟುಗಳನ್ನು ತೃಣಮೂಲ ಕಾಂಗ್ರೆಸ್ ಒಂದೇ ಗಳಿಸುವುದೇ ಅಥವಾ ಕಾಂಗ್ರೆಸ್ ಜೊತೆ ಸೇರಿ ಗಳಿಸುವುದಾ ಎಂದು ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಒಂದು ವೇಳೆ ತೃಣಮೂಲ ಕಾಂಗ್ರೆಸ್ ಮಾತ್ರ ಏಕಾಂಗಿಯಾಗಿ ಆ ಸಂಖ್ಯೆಯನ್ನು ಗಳಿಸಿದರೆ ದೀದಿಯನ್ನು ಬಂಗಾಳದಲ್ಲಿ ತಡೆಯುವವರೇ ಇಲ್ಲ.












Click it and Unblock the Notifications