ಯುಪಿಎಸ್ ಸಿ Rank ಪಡೆದ 23 ಕನ್ನಡಿಗರಿಗೆ ಅಭಿನಂದನೆ

UPSC toppers Karnataka
ಬೆಂಗಳೂರು, ಮೇ 13: 2011ನೇ ಸಾಲಿನ ಕೇಂದ್ರ ನಾಗರಿಕ ಸೇವಾ ಪರೀಕ್ಷೆ (UPSC)ಯಲ್ಲಿ Rank ಪಡೆದ 23 ಕನ್ನಡಿಗರನ್ನು ಸನ್ಮಾನಿಸಲು ರಾಜ್ಯ ಸರಕಾರ ನಿರ್ಧರಿಸಿದೆ. "ಈ ಸಾಲಿನ ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಜ್ಯದ ಸಾಧನೆ ಉತ್ತಮವಾಗಿದ್ದು ಇವರೆಲ್ಲರನ್ನು ಪುರಷ್ಕರಿಸಲಾಗುವುದು. ಮುಂದಿನ ಬಾರಿ ಇನ್ನಷ್ಟು ಯುವ ಜನತೆ ಯುಪಿಎಸ್ ಸಿ ಯಲ್ಲಿ ಸಾಧಿಸುವಂತಾಗಲಿ" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಸನ್ಮಾನ ಕಾರ್ಯಕ್ರಮದ ದಿನಾಂಕ ಮತ್ತು ಸ್ಥಳವನ್ನು ಕೆಲವೇ ದಿನಗಳಲ್ಲಿ ಪ್ರಕಟಿಸುವುದಾಗಿ ಸರಕಾರ ತಿಳಿಸಿದೆ. ಕೇಂದ್ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದ ಕರ್ನಾಟಕದ ಅಭ್ಯರ್ಥಿಗಳ ಹೆಸರು ಈ ಕೆಳಗಿನಂತಿವೆ. ಅವರು ಪಡೆದ Rank(ಆವರಣದಲ್ಲಿ) ನೀಡಲಾಗಿದೆ.

ಬಿ. ಸಿಂಧು(17ನೇ Rank), ದೀಪಾ ಎಸ್ ಮುದೋಲ್(30ನೇ), ಅರವಿಂದ್ ಮಲ್ಲಪ್ಪ(83ನೇ), ಬಿ. ಶರತ್(101ನೇ), ಕಾರ್ತಿಕ್ ರೆಡ್ಡಿ(110ನೇ), ಸಂದೇಶ್ ನಾಯ್ಕ್(129ನೇ), ವಿಜಯ್ ಕುಮಾರ್ ಸಿದ್ದಪ್ಪ ಬಾವಿಕಟ್ಟಿ(174ನೇ), ಸಂತೋಷ್ ಹಡಿಮನಿ(209ನೇ), ವಿ ಸೌಮ್ಯ(256), ಅಶ್ವಿನ್ ಡಿ ಗೌಡ(297), ಮಂಜುನಾಥ್ ಭಜಂತ್ರಿ(298), ಸಂತೋಷ್ ಹೆಗ್ಡೆ (302), ಅರುಣ್ ಕುಮಾರ್ ಕೆಂಭಾವಿ(355), ಐ ಪಿ ರೂಪಾ(382), ಸಂತೋಷ್ ಬಾಬು(410), ಎಸ್ ಜೆ ಯತೀಶ್(478), ಎನ್ ಸಿ ಶಿಲ್ಪಾ (493), ಟಿ ಅರುಣ್ (622), ಭೀಮ ಶೇಖರ್(734) ರಾಂಕ್ ಪಡೆದ ಕನ್ನಡಿಗರಾಗಿದ್ದಾರೆ.

;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+