ಹೆಚ್ಚಿನ ಚಿಕಿತ್ಸೆಗಾಗಿ ರಜನಿಕಾಂತ್ ಅಮೆರಿಕಕ್ಕೆ?
ಚೆನ್ನೈ,
ಮೇ 11: ಜ್ವರ ಮತ್ತು ಅಲರ್ಜಿಯಿಂದಾಗಿ ಸದ್ಯಕ್ಕೆ ಇಸಾಬೆಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೇರುನಟ ರಜನಿಕಾಂತ್ (60) ಅವರು ಶೀಘ್ರವೇ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುವ ಲಕ್ಷಣಗಳು ಹೆಚ್ಚಾಗಿವೆ. id="toptextpromo">ನಟ
ರಜನಿಕಾಂತ್ ಅವರು ತಮ್ಮಹೊಸ ಚಿತ್ರದ ಶೂಟಿಂಗ್ ಗೆ ರಜೆ ಹಾಕಿ ಅಮೆರಿಕಕ್ಕೆ ತೆರಳಿ, ಅಲ್ಲಿ ಸೂಕ್ತ ಚಿಕಿತ್ಸೆ ಪಡೆಯುವ ಇರಾದೆ ಹೊಂದಿದ್ದಾರೆ. ಅಗತ್ಯ ಅನುಮತಿ ಮತ್ತು ಪ್ರವಾಸ ದಾಖಲೆಗಳು ಸಿದ್ಧವಾಗಿವೆ. ದೆಹಲಿಯ ನೆರವು ಪಡೆದು ಅಮೆರಿಕಕ್ಕೆ ತೆರಳಲು ಅವರು ಸಜ್ಜಾಗಿದ್ದಾರೆ ಎಂದು ಖ್ಯಾತ ರಾಜಕೀಯ ವಿಶ್ಲೇಷಕ ಆರ್.ರಾಜಗೋಪಾಲನ್ ತಮ್ಮ ಟ್ವಿಟ್ಟರ್ ನಲ್ಲಿ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಮದ್ಯೆ, ವೈದ್ಯರ ಅನುಮತಿ ಪಡೆದು ರಜನಿಕಾಂತ್ ನಿನ್ನೆ (ಮೇ 10) ಸುಪ್ರಸಿದ್ಧ ಕಾಳಿಕಾಂಬ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಆನಂತರ ಪಂಬನ್ ಸ್ವಾಮಿಗಲ್ ಆಶ್ರಮಕ್ಕೆ ತೆರಳಿ ಧ್ಯಾನ ಮಾಡಿದರು. ಬಳಿಕ ರಜನಿ ಆಸ್ಪತ್ರೆಗೆ ವಾಪಸಾಗಿದ್ದಾರೆ. ಅವರ ಆರೋಗ್ಯ ಈಗ ಸ್ಥಿರವಾಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.











Click it and Unblock the Notifications