ಮಾಜಿ ಕೇಂದ್ರ ಸಚಿವ ಎಂಎಸ್ ಗುರುಪಾದಸ್ವಾಮಿ ವಿಧಿವಶ
ಬೆಂಗಳೂರು,
ಮೇ 10: ಮೊದಲ ಕನ್ನಡ ಸಂಸದ, ಮಾಜಿ ಕೇಂದ್ರ ಸಚಿವ ಎಂಎಸ್ ಗುರುಪಾದಸ್ವಾಮಿ (89) ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ಬೆಳಗ್ಗೆ 9 ಗಂಟೆಗೆ ವಿಧಿವಶರಾದರು. ತೀವ್ರ ಹೃದಯಾಘಾತದಿಂದಾಗಿ ಎರಡು ದಿನಗಳ ಹಿಂದೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. id="toptextpromo">ಮೈಸೂರಿನ
ಟಿ.ನರಸೀಪುರದ ಎಂಎಸ್, ಇಂದಿರಾಗಾಂಧಿ ಮತ್ತು ವಿ.ಪಿ. ಸಿಂಗ್ ಸರಕಾರದಲ್ಲಿ ಸಚಿವರಾಗಿದ್ದರು. ಪತ್ರಕರ್ತರಾಗಿಯೂ ದುಡಿದಿದ್ದ ಎಂಎಸ್, ಪ್ರಜಾಮತ ವಾರಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದರು. 1942ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಕಾಣಿಸಿಕೊಂಡಿದ್ದರು. ಮೃತರ ಅಂತ್ಯಕ್ರಿಯೆ ಮಂಗಳವಾರ ಸಂಜೆ ನೆರವೇರಲಿದೆ. id='are-slot-1' class='oiad oi-axt oiadv'> id='top-searched-articles'>ಯಡಿಯೂರಪ್ಪ
ಸಂತಾಪ
:
ಅತ್ಯಂತ
ಸರಳ,
ಸಮರ್ಥ
ಮತ್ತು
ಪ್ರಾಮಾಣಿಕರಾಗಿದ್ದ
ಗುರುಪಾದಸ್ವಾಮಿ
ಅವರು
ಜನರ
ಸೇವೆಗಾಗಿ
ತಮ್ಮ
ಜೀವನವನ್ನು
ಸವೆಸಿದ್ದರು.
ತಾವು
ನಂಬಿದ್ದ
ತತ್ತ್ವ,
ಆದರ್ಶಗಳನ್ನು
ಅವರು
ಯಾವತ್ತೂ
ಬಿಟ್ಟುಕೊಡುತ್ತಿರಲಿಲ್ಲ.
ಪೆಟ್ರೋಲಿಯಂ
ಮತ್ತು
ಅಣುವಿಜ್ಞಾನ
ಖಾತೆ
ಸಚಿವರಾಗಿ
ಅವರ
ಕೊಡುಗೆ
ಅಪಾರ.
ಅವರ
ಅಗಲಿಕೆಯಿಂದ
ನಾಡು
ಇಂದು
ಬಡವಾಗಿದೆ
ಮತ್ತು
ಒಬ್ಬ
ಸಮರ್ಥ
ಸಂಸತ್
ಸದಸ್ಯನನ್ನು
ಕಳೆದುಕೊಂಡಂತಾಗಿದೆ
ಎಂದು
ಯಡಿಯೂರಪ್ಪ
ಕಂಬನಿ
ಮಿಡಿದಿದ್ದಾರೆ.












Click it and Unblock the Notifications