ಮುಂದುವರಿದ 'ಮೇರು' ಮುಷ್ಕರ: ಸೋಮವಾರ ಮಾತುಕತೆ

ಬೆಂಗಳೂರು, ಮೇ 08: ಕಳೆದೊಂದು ವಾರದಲ್ಲಿ ವಿಮಾನ ಪ್ರಯಾಣಿಕರು ಅದರಲ್ಲೂ ಬೆಂಗಳೂರು ಪ್ರಯಾಣಿಕರು ಸಂಪೂರ್ಣವಾಗಿ ಬಸವಳಿದಿದ್ದಾರೆ. ಅತ್ತ ಆಗಸದಲ್ಲಿ ಏರ್ ಇಂಡಿಯಾ ಪೈಲಟ್ ಮುಷ್ಕರ ನಡೆಸುತ್ತಿದ್ದರೆ ಇತ್ತ ನೆಲದ ಮೇಲೆ ಮೇರು ಕ್ಯಾಬ್ ಚಾಲಕರು ಪ್ರಯಾಣಿಕರನ್ನು ಅಕ್ಷರಶಃ ಬೀದಿಪಾಲು ಮಾಡಿದ್ದರು. ಅಂದಹಾಗೆ 1400ಕ್ಕೂ ಹೆಚ್ಚು ಮೇರು ಕ್ಯಾಬ್ ಗಳು ಇನ್ನೂ ರಸ್ತೆಗಳಿದಿಲ್ಲ. ಈ ಮಧ್ಯೆ, ವಜ್ರಾದಪಿ ಬಿಎಂಟಿಸಿ ಪ್ರಯಾಣಿಕರಿಗೆ ಹೆಚ್ಚಿನ ಸೇವೆಯನ್ನು ಒದಗಿಸುತ್ತಿದೆ.

ಮೇರು ಚಾಲಕರ ವಿರುದ್ಧ ಸುಮಾರು 20 ಕೇಸುಗಳು ದಾಖಲಾಗಿವೆ. ದೈನಂದಿನ ಕೆಲಸವಿಲ್ಲದೆ ಬಹಳಷ್ಟು ಚಾಲಕರೂ ಹೈರಾಣಗೊಂಡಿದ್ದಾರೆ. ಈ ಮಧ್ಯೆ, ಪ್ರಯಾಣಿಕರ ಸುರಕ್ಷತೆಯ ನೆಪವೊಡ್ಡಿ ಮೇರು ಕ್ಯಾಬ್ಸ್ ಸಂಸ್ಥೆ ಸೇವೆಯನ್ನು ಸ್ಥಗಿತಗೊಳಿಸಿದೆ. ಚಾಲಕರು ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿದ್ದಾರೆ. ಪ್ರಯಾಣಿಕರು, ಚಾಲಕರು ಮತ್ತು ಸಂಸ್ಥೆಯ ಸುರಕ್ಷತೆ ಖಾತರಿಪಡಿಸಿಕೊಂಡ ನಂತರವಷ್ಟೇ ಸೇವೆ ಪುನರಾರಂಭಿಸುವುದಾಗಿ ಸಂಸ್ಥೆಯ ಉಪಾಧ್ಯಕ್ಷ ಗೇವಿನ್ ಡಿ ಅಬ್ರೆವೊ ಹೇಳಿದ್ದಾರೆ.

ಮೇರು ಕ್ಯಾಬ್ಸ್ ಸಂಸ್ಥೆಯು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಕರನ್ನು ಹೊತ್ತೊಯ್ಯುವ ಕೈಂಕರ್ಯದಲ್ಲಿ ತೊಡಗಿದೆ. ಆದರೆ ಕಳೆದ ಬುಧವಾರದಿಂದ ಸಂಸ್ಥೆಯು ಚಾಲಕರು ನಾನಾ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರದಲ್ಲಿ ತೊಡಗಿದ್ದಾರೆ. ಕಳೆದ ಬುಧವಾರ ಒಂದು ಕ್ಯಾಬ್ ಅನ್ನು ಸಂಪೂರ್ಣವಾಗಿ ಸುಟ್ಟುಹಾಕುವ ಮೂಲಕ ಹಿಂಸಾಚಾರಕ್ಕಿಳಿದು, ಆಕ್ರೋಶ ವ್ಯಕ್ತಪಡಿಸಿರುವ ಚಾಲಕರು ಸಂಸ್ಥೆಗೆ ಸೇರಿದ 20ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಸಂಸ್ಥೆಯ ಕ್ಯಾಬ್ ಗಳ ಗಾಜುಗಳು ಮತ್ತು ಕಚೇರಿಯ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಪ್ರಯಾಣ ದರ ಹೆಚ್ಚಿಸಿಲ್ಲ. ಆದ್ದರಿಂದ ದರ ಏರಿಸಬೇಕು ಮತ್ತು ನೋಂದಾವಣೆ ದರವನ್ನು ತಗ್ಗಿಸಬೇಕು ಎಂಬುದು ಚಾಲಕರ ಪ್ರಮುಖ ಬೇಡಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+