ಪಾತಕಿ ದಾವೂದ್ ಇಬ್ರಾಹಿಂ ಪುತ್ರನ ವಿವಾಹ ದುಬೈಗೆ ಶಿಫ್ಟ್
ಹೊಸದಿಲ್ಲಿ,
ಮೇ 08 : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಕಸ್ಕರ್ ಉಗ್ರ ಪಾತಕಿ ಒಸಾಮಾ ಬಿನ್ ಲ್ಯಾಡೆನ್ ಸಾವಿನ ಸಮ್ಮುಖದಲ್ಲಿ ತನ್ನ ಕಾರಸ್ಥಾನವನ್ನು ಕರಾಚಿಯಿಂದ ಸ್ಥಳಾಂತರಿಸಿದ್ದಾಯಿತು. ಅದೇ ರೀತಿ ಈಗ ಮಗನ ಮದುವೆಯನ್ನೂ ದುಬೈಗೆ ವರ್ಗಾಯಿಸುವಂತೆ ಪಾಕಿಸ್ತಾನದ ಐಎಸ್ಐ ದಾವೂದ್ ಗೆ ಸಲಹೆ ನೀಡಿದೆ. id="toptextpromo">ದಾವೂದ್
ಮಗ ಮೊಯಿನ್ ಪಾಕಿಸ್ತಾನದ ಮೂಲದ ಕೆನಡಾದ ಜವಳಿ ವ್ಯಾಪಾರಿಯ ಪುತ್ರಿಯನ್ನು ಮೇ 28ರಂದು ವರಿಸಲಿದ್ದಾನೆ. ಅತ್ತ ಲಾಡೆನ್ ಶವವಾಗಿ ಉರುಳುತ್ತಿದ್ದಂತೆ 1993ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್ ಐಎಸ್ಐ ಸೂಚನೆಯ ಮೇರೆಗೆ ಮೇ 1ರ ರಾತ್ರಿ ಕರಾಚಿಯಿಂದ ಸೌದಿ ಅರೇಬಿಯಾಕ್ಕೆ ಪಲಾಯನ ಮಾಡಿದ್ದಾನೆ ಎಂದು ವರದಿಯಾಗಿದೆ. id='are-slot-1' class='oiad oi-axt oiadv'> id='top-searched-articles'>ಛೋಟಾ
ಶಕೀಲ್ ಸಹ ದಾವೂದ್ ಜತೆಗೇ ಕರಾಚಿಯಿಂದ ಕಳಚಿಕೊಂಡಿದ್ದಾನೆ. ಅಮೆರಿಕ ಮಿಲಿಟರಿ ಕಾರ್ಯಾಚರಣೆಯಲ್ಲಿ ಲಾಡೆನ್ ಹತನಾದ ಬಳಿಕ ಪ್ರಾಣಭಯಕ್ಕೆ ಸಿಲುಕಿರುವ ದಾವೂದ್ ತನ್ನ ಮಗನ ಮದುವೆ ಸ್ಥಳವನ್ನು ದುಬೈಗೆ ವರ್ಗಾಯಿಸಿರುವುದಾಗಿ ಮೂಲಗಳು ಹೇಳಿವೆ.











Click it and Unblock the Notifications