ಬುಧವಾರ ಯಜುರ್ ಮಂದಿರ ಸಮೀಪ ಮೃತ್ ಸಂಸ್ಕಾರ
ಪುಟ್ಟಪರ್ತಿ
(ಅನಂತಪುರ), ಏ. 25: ಪವಾಡ ಪುರುಷ ಸಾಯಿಬಾಬಾ ಅವರ ಅಂತ್ಯಕ್ರಿಯೆಯು ಅವರು ವಾಸಿಸುತ್ತಿದ್ದ ಯಜುರ್ ಮಂದಿರದ ಸಮೀಪ ಬುಧವಾರ ಬೆಳಗ್ಗೆ (ಏ. 27) ನಡೆಯಲಿದೆ. ಇದಕ್ಕಾಗಿ ಐದು ಲಕ್ಷ ಭಕ್ತರು ಹಾಜರಾಗುವ ನಿರೀಕ್ಷೆ ಇದೆ. ಅದಕ್ಕೂ ಮುನ್ನ ಇಂದು ಹಾಗೂ ನಾಳೆ ಬಾಬಾ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿದೆ. ಪ್ರಧಾನಿ ಮನಮೋಹನ್ ಸಿಂಗ್ ಅವರು ಮಂಗಳವಾರ ಅಂತಿಮ ದರ್ಶನ ಪಡೆಯಲಿದ್ದು, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಸಪತ್ನೀಕರಾಗಿ ಸೋಮವಾರ ಬೆಳಗ್ಗೆ ಬಾಬಾ ದರುಶನ ಪಡೆದರು. id="toptextpromo">ಬಾಬಾ
ಪಾರ್ಥಿವ ಶರೀರವನ್ನು ಮಣ್ಣಿಗೆ ಅರ್ಪಿಸುವ ಮುನ್ನ ಎಲ್ಲ ಹಿಂದೂ ಸನ್ಯಾಸಿಗಳ ಅಂತ್ಯಸಂಸ್ಕಾರದಲ್ಲಿ ಅನುಸರಿಸುವ ವಿಧಿಯನ್ನೇ ಇಲ್ಲೂ ಅನುಸರಿಸಲಾಗುತ್ತದೆ. ಧರ್ಮಶಾಸ್ತ್ರದ ಪ್ರಕಾರ ಹಿಂದೂ ಸನ್ಯಾಸಿಗಳ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡುವುದಿಲ್ಲ. ಬ್ರಾಹ್ಮಣ, ವೀರಶೈವ ಸೇರಿದಂತೆ ಯಾವುದೇ ಒಳಪಂಗಡ ಸನ್ಯಾಸಿಯಾಗಿದ್ದರೂ ಅವರನ್ನು ಹೂಳಲಾಗುತ್ತದೆ. ಇದಕ್ಕೆ ಕಾರಣ ಇಹಲೋಕ ತ್ಯಜಿಸಿದ ಸನ್ಯಾಸಿಗಳು ಅ ದೇಹವನ್ನು ಮತ್ತೊಂದು ಅವತಾರದಲ್ಲಿ ಬಳಸಿಕೊಳ್ಳುತ್ತಾರೆ ಎಂಬುದು. id='are-slot-1' class='oiad oi-axt oiadv'> id='top-searched-articles'>ಇನ್ನೊಂದು
ಕಾರಣ ಹೀಗಿದೆ: ಹಿಂದು ಧರ್ಮದಲ್ಲಿ ಉಪನಯನ ಸಂಸ್ಕಾರವಾಗುವುದರೊಳಗೆ ಮೃತಪಟ್ಟ ಬಾಲಕನನ್ನು ಸುಡದೇ ಹೂಳುವ ಪದ್ಧತಿ ಇದೆ. ಸನ್ಯಾಸಿಗಳಿಗೂ ಉಪನಯನ ಸಂಸ್ಕಾರ ಇರುವುದಿಲ್ಲ. ಪೂರ್ವಾಶ್ರಮದಲ್ಲಿ ಉಪನಯನವಾಗಿದ್ದರೂ ಸನ್ಯಾಸಿಯಾದಾಗ ಸಾಮಾನ್ಯರಿಗೆ ಅನ್ವಯಿಸುವ ಎಲ್ಲ ಸಂಸ್ಕಾರಗಳಿಂದ ಅವರು ಮುಕ್ತಿ ಹೊಂದಿರುತ್ತಾರೆ. ಹಾಗಾಗಿ ಅವರಿಗೆ ಅಗ್ನಿಸ್ಪರ್ಶ ಇರುವುದಿಲ್ಲ. ಸೋ, ಬಾಬಾ ಅವರಿಗೂ ...











Click it and Unblock the Notifications