ಕೋಡಿಮಠದ ಭವಿಷ್ಯ ಮತ್ತು ಬಾಬಾ ಸಾವು

kodi Matt seer Shivananda
ಹಾಸನ, ಏ. 25: ದೇವಮಾನವ ಶ್ರೀ ಸತ್ಯ ಸಾಯಿಬಾಬಾ ಅವರು ದೈವಾದೀನರಾಗುವುದರೊಂದಿಗೆ ಧಾರ್ಮಿಕ ಗುರು ಒಬ್ಬರು ಅಸ್ತಂಗತರಾಗಲಿದ್ದಾರೆ ಎಂದು ಮೊನ್ನೆ ಏಪ್ರಿಲ್ 11ರಂದು ತಾವು ನುಡಿದಿದ್ದ ಭವಿಷ್ಯವೊಂದು ನಿಜವಾಗಿದೆ ಎಂದು ಹಾಸನ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಪ್ರತಿಕ್ರಿಯಿಸಿದ್ದಾರೆ.

ಭೂಮಿಯ ಮೇಲೆ ಪ್ರತಿಯೊಬ್ಬರ ಸಾವೂ ಶತಸಿದ್ಧ. ಸಾಯಿಬಾಬಾ ಅವರ ಸಾವಿನಿಂದ ಭಕ್ತವೃಂದಕ್ಕೆ ಅಪಾರ ನೋವುಂಟಾಗಿದೆ. ಅವರ ಅಂತ್ಯಸಂಸ್ಕಾರಕ್ಕೆ ಭಕ್ತರು ಶಾಂತಿಯಿಂದ ಸಹಕರಿಸಬೇಕು ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಅಕಾಲಿಕ ಮಳೆ ಸುರಿಯುತ್ತಿರುವುದು ಕೆಡುಕಿನ ಸಂಕೇತ. ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಮತ್ತೊಮ್ಮೆ ಜಲಪ್ರಳಯ ಸಂಭವಿಸಲಿದೆ. ಅಶ್ವಿನಿ ಮಳೆಯಾಗಿರುವುದು ಅರಸನಿಗೆ ಕೇಡು ಬರುವುದರ ಸೂಚಕ. ರಾಜ್ಯದಲ್ಲಿ ಶೀಘ್ರವೇ ಮಹತ್ತರ ರಾಜಕೀಯ ಬದಲಾವಣೆಯಾಗಲಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.

ಏನು ಹೇಳಿದ್ದರೆಂದರೆ.... ಕೋಡಿ ಮಠದ ಸ್ವಾಮೀಜಿ ಅವರು ಅಂದು (ಏ.11) ರಾಯಚೂರಿನಲ್ಲಿ ಮಾತನಾಡುತ್ತಾ, ವಿಶ್ವದಲ್ಲಿ ವಾಯು ಪ್ರಳಯವಾಗುತ್ತದೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿಯಲಿದೆ. 2009ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಇಡೀ ಉತ್ತರ ಕರ್ನಾಟಕ ತತ್ತರಿಸಿತ್ತು. ಅದೇ ರೀತಿಯ ಮತ್ತೊಂದು ಕಂಟಕ ಉತ್ತರ ಕರ್ನಾಟಕಕ್ಕೆ ಕಾದಿದೆ ಎಂದಿದ್ದರು.

ದೈವತ್ವಕ್ಕೀಡಾದ ಧಾರ್ಮಿಕ ಗುರು ಒಬ್ಬರು ಅಸ್ತಂಗತರಾಗಲಿದ್ದಾರೆ. ಅವರ ಸಾವಿನಿಂದ ಜನತೆ ಅಪಾರ ನೋವಿಗೆ ಈಡಾಗುತ್ತಾರೆ. ಕಾರ್ತೀಕ ಮಾಸದಲ್ಲಿ ರಾಜಕೀಯ ಪಕ್ಷವೊಂದು ಅವನತಿ ಹಾದಿ ಹಿಡಿಯುತ್ತದೆ. ತುಂಗಾ ನದಿ ಉಕ್ಕಿ ಹರಿಯುತ್ತದೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗುತ್ತದೆ ಎಂದು ಸ್ವಾಮೀಜಿಗಳು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+