ದೇವೇಗೌಡರ ಜೀವನದಲ್ಲಿ ನಡೆದ ಅತಿದೊಡ್ಡ ಪವಾಡ!

How Deve Gowda became PM?
ಬೆಂಗಳೂರು, ಏ.25: ಮಹನೀಯರು ಆಡಿದ ಮಾತುಗಳು ಯಾವತ್ತಿಗೂ ನಿಜವಾಗುತ್ತವೆ ಎಂಬುದಕ್ಕೆ ಸತ್ಯಸಾಯಿ ಬಾಬಾ ಮಾಡಿದ ಭಾಷಣವೇ ಇದಕ್ಕೆ ನಿದರ್ಶನ. ಬಾಬಾ ಅವರು ಅಚಾನಕ್ ಆಗಿ ಅಂದ ಮಾತು ಮಾಜಿ ಪ್ರಧಾನಿ ದೇವೇಗೌಡರ ಜೀವನದಲ್ಲಿ ನಿಜವಾಯಿತು. ಬಾಬಾ ಪವಾಡದ ಫಲವೇ 'ಪ್ರಧಾನಿ' ದೇವೇಗೌಡ.

1996ರಲ್ಲಿ ಬೆಂಗಳೂರಿನಲ್ಲೊಂದು ಸಮಾವೇಶ ನಡೆಯಿತು. ಆ ಸಮಾವೇಶಕ್ಕೆ ಎಲ್ಲ ಮಠಾಧೀಶರು ಜೊತೆಗೆ ಅಂದಿನ ಮುಖ್ಯಮಂತ್ರಿ ಎಚ್ ಡಿ ದೇವೇಗೌಡರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆಗ ಬಾಬಾ ಅವರು ಕನ್ನಡದಲ್ಲಿ ಭಾಷಣ ಮಾಡಿದರು. ಭಾಷಣದ ನಡುವೆ ಅವರು ವೇದಿಕೆ ಮೇಲೆ ಆಸೀನರಾದವರ ಹೆಸರುಗಳನ್ನು ಹೇಳುತ್ತಾ "ಪ್ರಧಾನಿ ದೇವೇಗೌಡ" ಎಂದು ಸಂಭೋದಿಸಿದರು.

ಗ್ಯಾಲರಿ : ಸಾಯಿಬಾಬಾಗೆ ಅಂತಿಮ ಪ್ರಣಾಮ ಸಲ್ಲಿಸಿದ ದೇವೇಗೌಡ

ಸಮಾವೇಶದಲ್ಲಿದ್ದ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡರು. ಬಾಬಾ ಅವರು ಹೇಳಿದ್ದು ಅಲ್ಲಿದ್ದವರಿಗೆ ಅರ್ಥವಾಗಿದ್ದೇ ಏಳು ತಿಂಗಳ ಬಳಿಕ. ಅಂದರೆ ಬಾಬಾ ಆ ರೀತಿ ಹೇಳಿದ ಏಳು ತಿಂಗಳಲ್ಲೇ ದೇವೇಗೌಡರು ಪ್ರಧಾನಿಯಾಗಿದ್ದರು! ಈ ಘಟನೆಯನ್ನು ಈಗಲೂ ಜನತಾದಳ ಕಾರ್ಯಕರ್ತರು ನೆನಪಿಸಿಕೊಂಡು ಅಚ್ಚರಿಪಡುತ್ತಿರುತ್ತಾರೆ.

;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+