ಕೊಪ್ಪಿಕರ್ ರಸ್ತೆ ಹೋಯ್ತು, ರಾಜ್ ರಸ್ತೆ ಬಂತು ಡುಂಡುಂ
ಹುಬ್ಬಳ್ಳಿ,
ಏ. 22: ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಕೊಪ್ಪಿಕರ್ ರಸ್ತೆಗೆ 'ಡಾ. ರಾಜ್ ಕುಮಾರ್ ರಸ್ತೆ' ಎಂದು ಪುನರ್ ನಾಮಕರಣ ಮಾಡಲಾಗಿದೆ. ಮೊನ್ನೆ ನಡೆದ ಸರಳ ಸಮಾರಂಭದಲ್ಲಿ ರಸ್ತೆಯ ಹೊಸ ನಾಮಫಲಕವನ್ನು ಡಾ. ರಾಜ್ ಅವರ ಪುತ್ರ, ಖ್ಯಾತ ನಟ ಶಿವರಾಜ್ ಕುಮಾರ್ ಅವರು ಅನಾವರಣಗೊಳಿಸಿದರು. id="toptextpromo">ಕನ್ನಡದ
ವರನಟ ಡಾ. ರಾಜ್ ಅವರು 'ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು'ಎಂದು 'ಆಕಸ್ಮಿಕ' ಚಿತ್ರಕ್ಕಾಗಿ ಇದೇ ನಗರದಲ್ಲಿ ಹಾಡಿ ಸಂಭ್ರಮಿಸಿದ್ದರು. ಅಂದಹಾಗೆ ಇದೇ ಭಾನುವಾರ ಡಾ. ರಾಜ್ 82ನೇ ಹುಟ್ಟುಹಬ್ಬವಿದೆ (ಏಪ್ರಿಲ್ 24, 1929 - ಏಪ್ರಿಲ್ 12, 2006). id='are-slot-1' class='oiad oi-axt oiadv'> id='top-searched-articles'>ಗಮನಾರ್ಹವೆಂದರೆ
ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ (HDMC) ಅಧಿಕೃತವಾಗಿ ಇನ್ನೂ ಪುನರ್ ನಾಮಕರಣದ ವಿಷಯಕ್ಕೆ ಸಮ್ಮತಿ ಸೂಚಿಸಿಲ್ಲ. ಆದರೂ ತರಾತುರಿಯಲ್ಲಿ ಏಪ್ರಿಲ್ 20ರಂದು ಈ ಕಾರ್ಯಕ್ರಮ ನಡೆದಿದೆ. 2009ರಲ್ಲಿ ಚುನಾಯಿತ ಪ್ರತಿನಿಧಿಗಳು ಪುನರ್ ನಾಮಕರಣ ನಿರ್ಣಯ ಅಂಗೀಕರಿಸಿದ್ದಾರಾದರೂ ಸಂಬಂಧಪಟ್ಟ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ ಎಂದು HDMC ಆಯುಕ್ತ ಕೆ.ವಿ. ತ್ರಿಲೋಕಚಂದ್ರ ತಿಳಿಸಿದ್ದಾರೆ.











Click it and Unblock the Notifications