ತೈವಾನ್ ನಲ್ಲಿ ರೆಡ್ ಲೈಟ್ ಏರಿಯಾಗೆ ಗ್ರೀನ್ ಸಿಗ್ನಲ್
ತೈವಾನ್,
ಏ. 12: ಜಗತ್ತಿನ ಅತ್ಯಂತ ಪುರಾತನ ವೃತ್ತಿಯಾದ ವೇಶ್ಯಾವಾಟಿಕೆಗೆ ತೈವಾನ್ ಸರಕಾರ ಇತ್ತೀಚೆಗೆ ಕಾನೂನು ಚೌಕಟ್ಟು ಕಲ್ಪಿಸಲು ಮನಸ್ಸು ಮಾಡಿದೆ. ದೇಶದಲ್ಲಿ ಸೆಕ್ಸ್ ಉದ್ಯಮವನ್ನು ಸುಧಾರಣೆಗೊಳಿಸಲು ಕಟಿಬದ್ಧವಾಗಿರುವ ಸರಕಾರ ಕಾನೂನುರೀತ್ಯವಾಗಿಯೇ ರೆಡ್ ಲೈಟ್ ಜಿಲ್ಲೆ ಸೃಷ್ಟಿಸಲು ಸಕಲ ಸಿದ್ಧತೆ ನಡೆಸಿದೆ. id="toptextpromo">ಪ್ರಸ್ತಾವಿತ
ಕಾನೂನಿನಲ್ಲಿ ಅಧಿಕೃತ ಪ್ರದೇಶಗಳಲ್ಲಿ ವೇಶ್ಯಾವಾಟಿಕೆಲ್ಲಿ ತೊಡಗಲು ವೇಶ್ಯೆಯರಿಗೆ ಪರವಾನಗಿ ಕಲ್ಪಿಸಲಾಗುವುದು. ಆದರೆ ತಮ್ಮದೇ ಆದ ಸ್ಥಳಗಳಲ್ಲಿ ವೇಶ್ಯವಾಟಿಕೆಯಲ್ಲಿ ಸಕ್ರಿಯರಾದರೆ ಅಂಥವರಿಗೆ ಶಿಕ್ಷೆ ವಿಧಿಸಲಾಗುವುದು. ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡಲು ಸೆಕ್ಸ್ ಉದ್ಯಮವನ್ನು ಉನ್ನತೀಕರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳನ್ನು ಸಂರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಒಳಾಡಳಿತ ಸಚಿವ ಲಿಯು ಎನ್ ಷಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಹಿಂದಿನ
ಕಾನೂನು ಪ್ರಕಾರ ಲೈಂಗಿಕ ಕಾರ್ಯಕರ್ತೆಯರಿಗಷ್ಟೇ ಶಿಕ್ಷೆಯಾಗುತ್ತಿದೆ. ಲೈಂಗಿಕ ಸೇವೆ ಒದಗಿಸುವ ವೇಶ್ಯೆಯರಿಗೆ 1,000 (4,500 ರುಪಾಯಿ) ಡಾಲರ್ ದಂಡ ಅಥವಾ ಮೂರು ದಿನಗಳ ತುರಂಗವಾಸ ವಿಧಿಸಲಾಗುತ್ತಿದೆ. ತೈವಾನ್ ಸೆಕ್ಸ್ ಉದ್ಯಮ ವಾರ್ಷಿಕ ಕೋಟ್ಯಂತರ ಡಾಲರ್ ವಹಿವಾಟು ನಡೆಸುತ್ತಿದ್ದು, ಸಾವಿರಾರು ವೇಶ್ಯೆಯರು ಇಲ್ಲಿ ಕಾರ್ಯನಿರತರಾಗಿದ್ದಾರೆ.











Click it and Unblock the Notifications