ಯಾರಿಗೆ ಬೇಕು ಮೊಹಾಲಿ ಪಂದ್ಯದ ಟಿಕೆಟ್?

ಮೊಹಾಲಿ, ಮಾ. 27: ವಿಶ್ವಕಪ್ 2011 ಎರಡನೇ ಸೆಮಿಫೈನಲ್ ಪಂದ್ಯಕ್ಕೆ ಟಿಕೆಟ್ ಸಿಗದೆ ಭಾರತ ಹಾಗೂ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಕಂಗಾಲಾಗಿದ್ದಾರೆ. ಟೆಕೆಟ್ ಸೋಲ್ಡ್ ಔಟ್ ಬೋರ್ಡ್ ನೇತು ಹಾಕಿರುವ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ಸ್ ಸುಮ್ಮನೆ ಕೂತಿದೆ. ಈ ನಡುವೆ ಕಾಳಸಂತೆಗೆ ಟಿಕೆಟ್ ನ ಮೂಲ ಬೆಲೆಯ ಐದು ಪಟ್ಟು ಹಣಕ್ಕೆ ಟಿಕೆಟ್ ಗಳು ಮಾರಾಟವಗುತ್ತಿದೆ. 1 ಲಕ್ಷ ರು ಬೆಲೆಗೂ ಟಿಕೆಟ್ ಮಾರಾಟವಗಿರುವ ವರದಿ ಬಂದಿದೆ.

ಸುಮಾರು 27,500 ಜನರಿಗೆ ಸ್ಥಳಾವಕಾಶ ಒದಗಿಸುತ್ತಿರುವ ಪಿಸಿಎ, ಮಾ.21 ಹಾಗೂ 22ರಂದು ಎಲ್ಲಾ 15,000 ಟಿಕೆಟ್ ಗಳನ್ನು ಮಾರಾಟ ಮಾಡಿದೆ. ಇನ್ನು ಕ್ರಿಕೆಟ್ ಕ್ಲಬ್, ಸ್ಥಳೀಯ ರಾಜಕಾರಣಿಗಳು ಸೇರಿದಂತೆ ಪ್ರಭಾವಿ ನಾಯಕರಿಗೆ ಉಳಿದ ಟಿಕೆಟ್ ಗಳು ಹಂಚಿಹೋಗಿದೆ. ಪಾಕಿಸ್ತಾನದಿಂದ ಕೂಡಾ ಟಿಕೆಟ್ ಗ್ ಭಾರಿ ಬೇಡಿಕೆ ಬಂದಿದೆ. ಸುಮಾರು 50 ಟಿಕೆಟ್ ಗಳು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನೀಡಲಾಗಿದೆ. ಸುಮಾರು 200 ಜನ ಅಭಿಮಾನಿಗಳು ಪಾಕಿಸ್ತಾನದಿಂದ ಅಧಿಕೃತ ಬರುವ ಸೂಚನೆ ಸಿಕ್ಕಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ರಿಲೆಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕೂಡಾ ಪಂದ್ಯ ವೀಕ್ಷಣೆಗೆ ಆಗಮಿಸುವ ನಿರೀಕ್ಷೆಯಿದೆ.

ಬ್ಲ್ಯಾಕ್ ಮಾರುಕಟ್ಟೆ: ಹೇಗಾದರೂ ಟಿಕೆಟ್ ಪಡೆದು ಪಂದ್ಯ ನೋಡಬೇಕೆಂಬ ಹಂಬಲದಿಂದ ಅಭಿಮಾನಿಗಳು ಕಾಳಸಂತೆಯಲ್ಲಿ ಕೇಳಿದ ಮೊತ್ತ ನೀಡಿ ಟಿಕೆಟ್ ಪಡೆಯುತ್ತಿದ್ದಾರೆ. 300 ರು ಬೆಲೆ ಟಿಕೆಟ್ ಸಾವಿರ ರು.ಗೆ ಹಾಗೂ 3 ಸಾವಿರ ರು ಬೆಲೆ ಟಿಕೆಟ್ 10 ಸಾವಿರಕ್ಕೆ ಮಾರಾಟವಾಗುತ್ತಿದೆ. 15,000 ರು ಬೆಲೆ ಟಿಕೆಟ್ 1 ಲಕ್ಷ ರು ತನಕ ಬೇಡಿಕೆ ಇದೆ. ಕಾಳಸಂತೆಯಲ್ಲಿ ಟಿಕೆಟ್ ಗಳು ಬಿಕರಿಯಾಗುತ್ತಿರುವುದರಿಂದ ಸ್ಥಳೀಯ ಕ್ರಿಕೆಟ್ ಅಭಿಮಾನಿಗಳಿಗೆ ಭಾರಿ ನಿರಾಶೆಯಾಗಿದೆ. ಗೊತ್ತಿರುವ ಕ್ರಿಕೆಟ್ ಕ್ಲಬ್, ಮಾಧ್ಯಮ ಮಿತ್ರರು, ಪೊಲೀಸ್ ಇಲಾಖೆ ಗೆಳೆಯರಿಗೆ ಅಭಿಮಾನಿಗಳು ನಿತ್ಯ ಕರೆ ಮಾಡಿ ಟಿಕೆಟ್ ಅಥವಾ ಪಾಸ್ ಕೊಡಿಸುವಂತೆ ದುಂಬಾಲು ಬಿದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+