ಟ್ವಿಟ್ಟರ್ ಗೆ ಐದು ವರ್ಷ; ಮುಂದುವರೆಯಲಿ ಹರ್ಷ

Twitter celebrates fifth birthday: Happy Tweeting
ನ್ಯೂಯಾರ್ಕ್, ಮಾ.22: ದಿನ ದಿನದಿಂದ ದಿನಕ್ಕೆ ತ್ವರಿತವಾಗಿ ಬೆಳೆಯುತ್ತಿರುವ ಮೈಕ್ರೋ ಬ್ಲಾಗಿಂಗ್ ಸೈಟ್ ನಲ್ಲಿ ಕೇವಲ 140 ಅಕ್ಷರಗಳ ತುಂಬಿಸುತ್ತಾ, ಗೆಳೆಯ, ಗೆಳತಿಯರನ್ನು ನಿಮ್ಮ ಹಿಂಬಾಲಕರನ್ನಾಗಿಸಿಕೊಳ್ಳುವ ತಕ್ಷಣಕ್ಕೆ ಜಗತ್ತಿನೆಲ್ಲೆಡೆಯ ಸುದ್ದಿ, ಸ್ವಾರಸ್ಯಕರ ಸಂಗತಿಗಳನ್ನು ನೀಡುವ ಟ್ವಿಟ್ಟರ್ ಗೆ ಈಗ ಐದು ವರ್ಷದ ಸಂಭ್ರಮ. 2006ರಲ್ಲಿ ಆರಂಭವಾದ ಈ ಸಾಮಾಜಿಕ ಜಾಲತಾಣ ಮಾ. 21 ರಂದು ಐದನೇ ವರ್ಷದ ಬರ್ಥಡೇ ಆಚರಿಸಿಕೊಂಡಿದೆ.

twittr ಎಂದು ಮೊದಲಿಗೆ ಕರೆಯಲ್ಪಡುತ್ತಿದ್ದ Twitter ಅನ್ನು ಆರಂಭಿಸಿದ ಕೀರ್ತಿ ಜಾಕ್ ಡೊರ್ಸಿ, ಬಿಜ್ ಸ್ಟೋನ್ ಹಾಗೂ ಇವಾನ್ ವಿಲಿಯಂ ಗೆ ಸಲ್ಲುತ್ತದೆ. ಸಹ ಉದ್ಯೋಗಿಗಳಿಗೆ ಸ್ವಾಗತ ಎಂಬ ಟ್ವೀಟ್ ಸಂದೇಶದ ಮೂಲಕ ಆರಂಭವಾದ ಟ್ವಿಟ್ಟರ್ ಹಕ್ಕಿಯ ಹಾರಾಟ ನಿರಂತರವಾಗಿ ಸಾಗಿ ಕೋಟ್ಯಾಂತರ ಜನರನ್ನು ತಲುಪಿದೆ.

"ತ್ವರಿತವಾಗಿ ಜನರನ್ನು ಸಂಪರ್ಕಿಸಬಲ್ಲ ಅರ್ಥಪೂರ್ಣ ಸಾಧನ" ಎಂದು ಟ್ವಿಟ್ಟರ್ ನ ಸದ್ಯದ ಸಿಇಒ ಡಿಕ್ ಕಾಸ್ಟೊಲೊ ಹೇಳುತ್ತಾರೆ. ಸುಮಾರು 140 ಮಿಲಿಯನ್ ಟ್ವೀಟ್ ಪ್ರತಿದಿನ ಹರಿದಾಡುತ್ತಿದೆ. ಕೇವಲ ಗೆಳೆಯರೊಡನೆ ಹರಟೆಗೆ ಸೀಮಿತವಾಗದೆ, ಸುದ್ದಿ ಹಾಗೂ ಮಾಹಿತಿ ಹಂಚಿಕೆಗೆ ಸೂಕ್ತ ವೇದಿಕೆಯಾಗಿ ಟ್ವಿಟ್ಟರ್ ನಿಂತಿದೆ.

ವಿಶ್ವದ ಪ್ರಭಾವಿ ತಾಣವಾಗಿ ಟ್ವಿಟ್ಟರ್ ಬೆಳದಿದೆ ಎಂದರೆ ಅದನ್ನು ಬಳಸುತ್ತಿರುವ ಗಣ್ಯಾತಿಗಣ್ಯರ ಪಟ್ಟಿಯೇ ಸಾಕ್ಷಿ ಒದಗಿಸುತ್ತದೆ. ಕೇವಲ ಎರಡು ದಿನಗಳ ಹಸುಗೂಸಿಗೂ ಒಂದು ಟ್ವಿಟ್ಟರ್ ಖಾತೆ[@babyinayat] ಇದೆ. 98 ದಾಟಿದ ವಯೋವೃದ್ಧರು ಬಳಸುತ್ತಿದ್ದಾರೆ. ಬರಾಕ್ ಒಬಾಮಾ ದಿಂದ ಹಿಡಿದು ಪೈಜಾಮಾ ಧರಿಸಿ ಮನೇಲಿ ಕೂತ ಅನಾಮಧೇಯ ಕಾಲೇಜು ಹುಡುಗನೊಬ್ಬ ಕೂಡಾ ಟ್ವಿಟ್ಟರ್ ಬಳಸಬಹುದಾಗಿದೆ. ಬಾಲಿವುಡ್, ಹಾಲಿವುಡ್ ಅಲ್ಲದೆ ಎಲ್ಲಾ ಸಿನಿತಾರೆಯರ ನೆಚ್ಚಿನ ಸಂಗಾತಿಯಾಗಿದೆ. ದೇವೇಗೌಡರಾದಿಯಾಗಿ ಎಲ್ಲರೂ ಟ್ವಿಟ್ಟರ್ ಹಕ್ಕಿ ಹಿಂದೆ ಬಿದ್ದವರೆ.

2008ರ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ವಿಟ್ಟರ್ ಆನ್ನು ಚುನಾವಣಾ ಪ್ರಚಾರಕ್ಕೆ ಸಮರ್ಥವಾಗಿ ಬರಾಕ್ ಒಬಾಮಾ ಬಳಸಿಕೊಂಡಿದ್ದರು. ಸುಷ್ಮಾ ಸ್ವರಾಜ್ ಸಕ್ರಿಯವಾಗಿ ಅಪ್ಡೇಟ್ ಮಾಡುವ ಚಟವಿದೆ. ಇತ್ತೀಚಿನ ಜಪಾನ್ ಸುನಾಮಿ, ಭೂಕಂಪ ಸಂದರ್ಭದಲ್ಲಿ, ವರ್ಷದ ಕೆಳಗೆ ಬೆಂಗಳೂರಿನ ಕಾರ್ಲ್ ಟನ್ ಟವರ್ ದುರಂತ ಸಂದರ್ಭದಲ್ಲಿ ಬೇರೆ ಎಲ್ಲಾ ಮಾಧ್ಯಮಗಳು ಕೈ ಕೊಟ್ಟಾಗ ಕೆಲಸ ಮಾಡಿದ್ದು, ಸಹಾಯ ಹಸ್ತ ಚಾಚಿದ್ದು ಟ್ವಿಟರ್.

ಬೇಕಾದ್ದು ಟ್ವೀಟ್ ಮಾಡುವ ಸೌಲಭ್ಯ ಇರುವುದರಿಂದ ಬಿಕಿನಿ ಚಿತ್ರ ಹೊರ ಹಾಕುವುದು, ಶಶಿ ತರೂರ್ ಸಂದೇಶಗಳು ರಾಜೀನಾಮೆಗೆ ಕಾರಣವಾಗಿದ್ದು, ದುಬೈ ಪತ್ರಕರ್ತೆ ಕೂಡಾ ಟ್ವೀಟ್ ಮಾಡಿ ಕೆಲಸ ಕಳೆದುಕೊಂಡಿದ್ದು, ವಿಶ್ವಕಪ್ ಫುಟ್ಬಾಲ್ ಸಮಯದಲ್ಲಿ ಆಟಗಾರರಿಗೆ ನಿರ್ಬಂಧ, ನಕಲಿ ಟ್ವಿಟ್ಟರ್ ಖಾತೆಗಳು, ಖಾನ್ ದ್ವಯರ ಸಮರ ಹೀಗೆ ಇಡೀ ವಿಶ್ವವನ್ನು ಅಕ್ಷರಗಳ ಅಂಕೆಯಲ್ಲಿ ಹಿಡಿದಿಡಬಲ್ಲ ಸೂಕ್ತ ಸಾಧನವಾಗಿ ಟ್ವಿಟ್ಟರ್ ಬೆಳೆಯುತ್ತಿದೆ.

ಅಂದ ಹಾಗೆ, ಟ್ವಿಟ್ಟರ್.ಕಾಂನಲ್ಲಿ ಒನ್ ಇಂಡಿಯಾ ಕನ್ನಡ ಖಾತೆಗೆ ಸೇರಲು ಮರೆಯಬೇಡಿ. ಟ್ವಿಟ್ಟರ್ ರಾಜಧಾನಿ ಬೆಂಗಳೂರು ಎಂಬುದನ್ನು ಹೆಮ್ಮೆಯಿಂದ ಹೇಳಿಕೊಳ್ಳಿ. ಟ್ವಿಟ್ಟರ್ ಗೆ ಮತ್ತೊಮ್ಮೆ ಹುಟ್ಟುಹಬ್ಬದ ಶುಭ ಹಾರೈಕೆಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+