ನೀರಾಗೂ ಪೇಜಾವರ ಮಠಕ್ಕೂ ಏನು ಲಿಂಕ್?

ನೀರಾ ರಾಡಿಯಾ ಜೊತೆ ಹೇಳಿಕೊಳ್ಳುವಂತಹ ಸಂಬಂಧ ಇಲ್ಲ ಎಂದಿದ್ದ ಪೇಜಾವರಶ್ರೀ ಈ ಬೆಳವಣಿಗೆ ಯಿಂದ ಇರಿಸುಮುರಿಸಿಗೆ ಒಳಗಾಗಿದ್ದಾರೆ. ಇದೀಗ ಪೇಜಾವರ ಮಠಕ್ಕೆ ಸಂಬಂಧ ಪಟ್ಟ ಹಲವಾರು ಟ್ರಸ್ಟ್‌ಗಳಿಗೆ ನೀರಾ ರಾಡಿಯಾ ಯಥೇಚ್ಛ ಹಣ ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಮಠದ ಚಿರಾಸ್ತಿ, ಚರಾಸ್ತಿ ಅಭಿವೃದ್ಧಿಗೆ ರಾಡಿಯಾ ಕೊಡುಗೆ ಅಪಾರ.
ಆರಂಭದಲ್ಲಿ ನೀರಾ ಹೆಸರು ಪೇಜಾವರ ಮಠದೊಂದಿಗೆ ತಳುಕು ಹಾಕಿಕೊಂಡಾಗ 'ಮಠದ ಭಕ್ತರಲ್ಲಿ ಅವರೂ ಕೂಡಾ ಒಬ್ಬರೂ ಇದಕ್ಕಿಂತ ಹೆಚ್ಚಿನ ಸಂಬಂಧವಿಲ್ಲ" ಎಂದು ವಿಶ್ವೇಶ ತೀರ್ಥರು ಹೇಳಿದ್ದರು. ನಂತರ ನೀರಾ ರಾಡಿಯಾ ನನಗೆ ಚೆನ್ನಾಗಿ ಗೊತ್ತಿದ್ದವರು. ಅವರು ಮಠದ ಭಕ್ತೆ. ಹಲವಾರು ರೀತಿಯ ಸಹಾಯವನ್ನು ಮಾಡಿದ್ದಾರೆ ಎಂದು ಹೇಳಿದ್ದರು.
ಬೇರೆ ಬೇರೆ ಹೆಸರುಗಳಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ಉದ್ದೇಶಗಳಲ್ಲಿ ಮಠದ ಟ್ರಸ್ಟ್ ಗಳಿಗೆ ಹಣ ಸಂದಾಯವಾಗಿದೆ. ನೀರಾ ರಾಡಿಯಾ ಪೇಜಾವರ ಮಠಕ್ಕೆ ಲಕ್ಷಾಂತರ ಬೆಲೆ ಬಾಳುವ ಮೂರು ಕಾರುಗಳನ್ನು ಕೊಟ್ಟಿದ್ದಾರೆ ಎಂಬ ವಿಷಯವೂ ಬಹಿರಂಗಗೊಂಡಿದೆ. ರಾಡಿಯಾ ಕೊಟ್ಟಿರುವ ವಾಹನಗಳಲ್ಲಿ ಒಂದು ಇನೋವಾ, ಟೆಂಪೋ ಟ್ರಾವೆಲರ‍್ಸ್ ಸೇರಿದಂತೆ ಒಟ್ಟು ಆರು ಕಾರುಗಳಿದ್ದು, ಇನ್ನೂ ಹತ್ತಾರು ವಾಹನಗಳು ಸೇರಿದೆ ಎನ್ನಲಾಗಿದೆ. ಇನ್ನೂ ಕೆಲವು ವಾಹನಗಳು ರಾಜ್ಯ ಬಿಜೆಪಿ ನಾಯಕರುಗಳಿಗೆ ಮಠದ ಕಡೆಯಿಂದ ಉಡುಗೊರೆಯಾಗಿ ಸಿಕ್ಕಿದೆ ಎಂಬ ವಿಷಯವೂ ಹೊರಬಿದ್ದಿದೆ.
ಈ ಹಿಂದೆ ಬಿಜೆಪಿ ಪ್ರಭಾವಿ ನಾಯಕ ಅನಂತ್ ಕುಮಾರ್ ಅವರು ವಿಮಾನಯಾನ ಸಚಿವರಾಗಿದ್ದಾಗ ನೀರಾ ರಾಡಿಯಾ ಪರಿಚಯಿಸಿದ್ದೇ ಪೇಜಾವರ ಶ್ರೀಗಳು ಎಂಬ ಮಾಹಿತಿ ಹೊರ ಬಿದ್ದಿತ್ತು. ನಂತರ ದೆಹಲಿಯಲ್ಲಿರುವ ವಸಂತ್ ಕುಂಜ್ ಭೂಮಿ ಕೂಡಾ ರಾಡಿಯಾ ನೀಡಿದ್ದು ಎಂಬ ಆರೋಪ ಎದುರಾಗಿತ್ತು. ಆದರೆ, ಎರಡನ್ನೂ ಅಲ್ಲಗೆಳೆದಿದ್ದ ವಿಶ್ವೇಶ ತೀರ್ಥ ಸ್ವಾಮೀಜಿಗಳು, ದೆಹಲಿಯ ಭೂಮಿ ರಾಮ ವಿಠಲ ಶಿಕ್ಷಣ್ ಸೇವಾ ಸಮಿತಿಗೆ ಸೇರಿದ್ದು, ರಾಡಿಯಾಗೂ ಮಠಕ್ಕೂ ಅಂಥ ಸಂಪರ್ಕವಿಲ್ಲ ಎಂದಿದ್ದರು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications