ಮದರಸಾ ಗುರುವಿನಿಂದ ರೇಪ್, ಅಶ್ವಿನಿ ಆತ್ಮಹತ್ಯೆ
ಕೊಪ್ಪ,
ಮಾ.20 : ಇಲ್ಲಿಗೆ ಸಮೀಪದ ಸರಳತೋಟ ಎಂಬಲ್ಲಿ ಬಿಸಿ ಅಶ್ವಿನಿ (19) ಎಂಬ ಬಾಲಕಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಚಿತ್ರ ತಿರುವು ಪಡೆದಿದೆ. ಅಶ್ವಿನಿ ಆತ್ಮಹತ್ಯೆಗೆ ಮದರಸಾವೊಂದರ ಧರ್ಮಗುರು ಮೌಲ್ವಿ ಮತ್ತು ಆತನ ಗೆಳೆಯ ನಡೆಸಿದ ಅತ್ಯಾಚಾರ ಕಾರಣ ಎಂದು ಅಶ್ವಿನಿ ತಾಯಿ ಆಶಾ ಪೊಲೀಸರಿಗೆ ದೂರು ನೀಡಿದ್ದಾಳೆ. ಅಶ್ವಿನಿ ತಾಯಿ ಪ್ರಕಾರ ಅಶ್ವಿನಿ ತನ್ನ ಗೆಳತಿ ಶಾಹಿನಾ ಎಂಬಾಕೆಯ ಜೊತೆ ದೇವರಮನೆ ಎಂಬಲ್ಲಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಇದರಿಂದ ಮನನೊಂದ ಅಶ್ವಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಲಾಗಿದೆ. id="toptextpromo">ದೇವರಮನೆ
ಸಮೀಪ ಹೊಂಚು ಹಾಕಿ ಕುಳಿತ್ತಿದ್ದ ಮದರಸದ ಮೌಲ್ವಿ ಗುಲಾಂ ಸರ್ವರ್ ಮತ್ತು ಆತನ ಮಿತ್ರ ಮೀನು ವ್ಯಾಪಾರಿ ಅಬ್ದುಲ್ ರಜಾಕ್ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೆ ಈ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಂಡು, ಅಶ್ವಿನಿಯನ್ನು ಬೆದರಿಸಿದ್ದಾರೆ. ಇದರಿಂದ ಮನನೊಂದ ಆಕೆ, ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಆಶಾ ತಿಳಿಸಿದ್ದಾರೆ. ಮಾರ್ಚ್ ಮೊದಲ ವಾರದ ನಡೆದ ಈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಶಾ ನೀಡಿರುವ ಎರಡನೇ ದೂರು ಇದಾಗಿದೆ. id='are-slot-1' class='oiad oi-axt oiadv'> id='top-searched-articles'>ಪ್ರಕರಣವನ್ನು
ದಾಖಲಿಸಿಕೊಂಡಿರುವ ಹರಿಹರಪುರ ಪೊಲೀಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಯುತ್ತಿದ್ದಾರೆ. ಆತ್ಮಹತ್ಯೆ ನಡೆದಾಗ ಕೇವಲ ಆತ್ಮಹತ್ಯೆ ಎಂದು ದೂರು ನೀಡಿದ್ದ ಅಶ್ವಿನಿ ತಾಯಿ ಇದೀಗ ಹೊಸ ದೂರು ನೀಡಿರುವುದು ಹಾಗೂ ಪ್ರಕರಣದಲ್ಲಿ ಮೌಲ್ವಿಯ ಹೆಸರು ಬಂದಿರುವುದು ಹಲವು ರೀತಿಯ ಸಂಶಯ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.











Click it and Unblock the Notifications