ಯಡಿಯೂರಪ್ಪರಿಂದ ಫೋನ್ ಕದ್ದಾಲಿಕೆ: ಎಚ್ಡಿಕೆ

ಹಲವಾರು ದಿನಗಳಿಂದ ರಾಜ್ಯ ಸರ್ಕಾರದ ತನ್ನ ಮೊಬೈಲ್ ದೂರವಾಣಿಯನ್ನು ಕದ್ದಾಲಿಸುತ್ತಿದೆ. ಕೇವಲ ನನ್ನದಲ್ಲದೆ, ವಿರೋಧ ಪಕ್ಷದ ಪ್ರಮುಖ ನಾಯಕರ ಚಲನವಲನಗಳ ಮೇಲೆ ಗಮನವಿರಿಸಲಾಗಿದೆ. ಇಷ್ಟೇಕೆ ಯಡಿಯೂರಪ್ಪ ಅವರ ವಿರುದ್ಧ ಮಾತನಾಡುವ ಬಿಜೆಪಿ ಪಕ್ಷದ ಮುಖಂಡರುಗಳ ಫೋನ್‌ನ್ನು ಕೂಡ ಬಿಟ್ಟಿಲ್ಲ. ಯಡಿಯೂರಪ್ಪ ಜನರ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಯಡ್ಡಿ ಕರೆ ಮಾಡಿದ್ದರೆ? : ನವದೆಹಲಿಯಲ್ಲಿ ನಾನು, ಪ್ರೇರಣಾ ಟ್ರಸ್ಟ್ ದೇಣಿಗೆ ವಿಷಯ ಬಹಿರಂಗ ಮಾಡುವ ಬಗ್ಗೆ ಹೇಗೋ ತಿಳಿದುಕೊಂಡ ಯಡಿಯೂರಪ್ಪ ಅವರು ಹೇಗಾದರೂ ತಡೆಯೊಡ್ಡಲು ವಿಫಲ ಯತ್ನ ನಡೆಸಿದ್ದರು. ಸುದ್ದಿಗೋಷ್ಠಿಗೂ ಒಂದು ದಿನವ ಮುನ್ನ, ನನ್ನ ಇಬ್ಬರು ಆಪ್ತ ಕಾರ್ಯದರ್ಶಿಗಳಿಗೆ ಹಾಗೂ ಜೆಡಿಎಸ್ ಹಿರಿಯ ಸದಸ್ಯ ಎಂಸಿ ನಾಣಯ್ಯ ಅವರಿಗೆ ದೂರವಾಣಿ ಕರೆ ಮಾಡಿದ್ದರು. ದಯಮಾಡಿ ಮಾಧ್ಯಮಗಳ ಮುಂದೆ ಹೋಗಿ ಪ್ರೇರಣಾ ದೇಣಿಗೆ ವಿಷಯವನ್ನು ಬಹಿರಂಗ ಪಡಿಸಬೇಡಿ ಎಂದು ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಈ ವಿಷಯ ನನಗೆ ತಲುಪುವ ಮೊದಲೇ ನಾನು ದೆಹಲಿ ತಲುಪಿದ್ದೆ. ನನ್ನ ಆಪ್ತ ಕಾರ್ಯದರ್ಶಿಗೆ ಪದೇ ಪದೇ ಯಡಿಯೂರಪ್ಪ ಹಾಗೂ ಅವರ ಪಿಎಯಿಂದ ಕರೆ ಬಂದಿದೆ. ಯಡಿಯೂರಪ್ಪ ಅವರೊಡನೆ ರಾಜಿ ಎಂದಿಗೂ ಸಾಧ್ಯವಿಲ್ಲ. ಪ್ರೇರಣಾ ಟ್ರಸ್ಟ್ ದೇಣಿಗೆ ವಿಚಾರವಾಗಿ ಸುಪ್ರೀಂಕೋರ್ಟ್ ನಲ್ಲಿ ಕಾನೂನು ಸಮರ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.












Click it and Unblock the Notifications