ಜಪಾನ್ ನಲ್ಲಿದ್ದ ಐಟಿ ಉದ್ಯೋಗಿಗಳು ವಾಪಸ್

ಜಪಾನಿನಲ್ಲಿರುವ ಇನ್ಫೋಸಿಸ್ ಉದ್ಯೋಗಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಇನ್ಫೋಸಿಸ್ ಆಡಳಿತ ಮಂಡಳಿ ನಿರ್ಧರಿಸಿದೆ. ಟೋಕಿಯಾದಲ್ಲಿರುವ ಸುಮಾರು 350 ಜನ ಭಾರತೀಯ ಉದ್ಯೋಗಿಗಳನ್ನು ಭಾರತಕ್ಕೆ ಕರೆ ತರಲು ವಿಶೇಷ ವಿಮಾನ ವ್ಯವಸ್ಥೆಯನ್ನು ಇನ್ಫೋಸಿಸ್ ಕಲ್ಪಿಸಿದೆ. ವಿಪ್ರೋ ಕಂಪೆನಿಯ ಕಂಪೆನಿ ಉದ್ಯೋಗಿ ಸೋಮಣ್ಣ ಅವರು ಕನ್ನಡ ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ, ವಿಮಾನ ಟಿಕೆಟ್ ಸಿಗುವುದು ಕಷ್ಟವಾಗಿದೆ. ನನ್ನ ಪುಣ್ಯಕ್ಕೆ ನಾಳೆ ಪ್ರಯಾಣದ ಟಿಕೆಟ್ ಸಿಕ್ಕಿದೆ. ಕಂಪೆನಿಯೊಡನೆ ಸಂಪರ್ಕ ಸಾಧಿಸಲು ಸಂವಹನ ಮಾಧ್ಯಮ ಇಲ್ಲದ್ದಂತಾಗಿದೆ ಎಂದಿದ್ದಾರೆ.
ವಿಡಿಯೋಗಳು: ಸುನಾಮಿ ಅಲೆಗಳ ರೌದ್ರ ನರ್ತನ ಚಿತ್ರಗಳು | ಸುನಾಮಿ ಅಲೆಗಳ ದಾಳಿಗೆ ಕುಬ್ಜವಾದ ಜಪಾನ್
ಇನ್ಫೋಸಿಸ್, ವಿಪ್ರೋ, ಐ ಗೇಟ್, ಜೆನಿಸಿಸ್, ಎಕ್ಸಿಮ್ ಸಾಫ್ಟ್, ಐ ಫೆಕ್ಸ್, ಎಲ್ ಅಂಡ್ ಟಿ ಇನ್ಫೋಟೆಕ್, ಮೈಂಡ್ ಟ್ರೀ, ಪಟ್ನಿ, ಸಾಸ್ಕೇನ್, ಸತ್ಯಂ, ಟಿಸಿಎಸ್ ಸೇರಿದಂತೆ ಸುಮಾರು 55 ಕ್ಕೂ ಅಧಿಕ ಐಟಿ ಕಂಪೆನಿಗಳು ಜಪಾನಿನಲ್ಲಿ ಕರ್ಯ ನಿರ್ವಹಿಸುತ್ತಿವೆ. ಜಪಾನಿನಲ್ಲಿ 1996ರಲ್ಲಿ ಇನ್ಫೋಸಿಸ್ ತನ್ನ ಘಟಕವನ್ನು ಆರಂಭಿಸಿತ್ತು. ಸುಮಾರು 500 ಜನ ಉದ್ಯೋಗಿಗಳಿದ್ದು, ಭಾರತ ಮೂಲದ 350 ಜನರನ್ನು ವಾಪಸ್ ಕರೆಸಿಕೊಳ್ಳುತ್ತಿದೆ.
ಷೇರುಪೇಟೆ ಕುಸಿತ: ಪರಮಾಣು ವಿದ್ಯುತ್ ಸ್ಥಾವರಗಳಿಂದ ಅಣು ವಿಕಿರಣ ಸೋರಿಕೆ ಸುದ್ದಿ ಹರಡುತ್ತಿದ್ದಂತೆ ಷೇರುಪೇಟೆ ವಹಿವಾಟಿನಲ್ಲಿ ಶೇ. 7 ರಷ್ಟು ಕುಸಿತ ಕಂಡಿದೆ. ಆದರೆ, ಜಪಾನಿನ ಕೇಂದ್ರೀಯ ಬ್ಯಾಂಕ್ ಸುಮಾರು 183 ಶತ ಕೊಟಿ ನೀಡುವ ಮೂಲಕ ಆರ್ಥಿಕ ಚೇತರಿಕೆಯ ಹಾದಿ ಕಾಣುತ್ತಿದೆ. ಆದರೂ, ವಿಶ್ವದಲ್ಲಿ ಮೂರನೆ ಅತಿದೊಡ್ಡ ಆರ್ಥಿಕತೆ ಹೊಂದಿದ್ದ, ಐದನೆ ಅತಿದೊಡ್ಡ ಪರಮಾಣು ಶಕ್ತಿ ಉತ್ಪಾದನಾ ದೇಶವಾದ ಜಪಾನ್ ನಲ್ಲಿ ಈಗ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಜಾಗತಿಕ ಆರ್ಥಿಕ ಕುಸಿತದ ನಂತರ ಜಪಾನಿನಲ್ಲಿ ಅತಿ ದೊಡ್ಡ ಆರ್ಥಿಕ ಹಿನ್ನೆಡೆಯನ್ನು ಕಾಣುತ್ತಿದೆ.












Click it and Unblock the Notifications