ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಪುಟ ವಿಸ್ತರಣೆಗೆ ಮಹೂರ್ತ ಫಿಕ್ಸ್ ಮಾಡಿದ ಸಿಎಂ?

By Mahesh
|
Google Oneindia Kannada News

Karnataka Cabinet Expansion date fixed?
ಬೆಂಗಳೂರು, ಮಾ.2: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮಹೂರ್ತ ಸಿದ್ಧಮಾಡಿದ್ದಾರೆ ಎಂಬ ದಟ್ಟ ಸುದ್ದಿ ಹರಡಿದೆ. ಶಿವರಾತ್ರಿ ಕಳೆದ ನಂತರ ಒಳ್ಳೆದಿನದಂದು ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಿದ್ದ ಸಿಎಂಗೆ ಮಾ.14 ಪ್ರಶಸ್ಥವಾದ ದಿನ ಎಂದು ಅವರ ಆಪ್ತ ಜ್ಯೋತಿಷಿಗಳು ತಿಳಿಸಿದ್ದಾರೆ. ಸಂಪುಟ ವಿಸ್ತರಣೆಗೆ ಹಲವು ಬಾರಿ ಸಿಎಂ ಮುಂದಾದರೂ ಭುಗಿಲೆದ್ದ ಭಿನ್ನಮತದಿಂದ ವಿಸ್ತರಣೆ ಸಾಧ್ಯವಾಗಿರಲಿಲ್ಲ.

ಹೀಗೆ ಹಲವು ಬಾರಿ ಮುಂದೂಡಲ್ಪಟ್ಟ ಸಂಪುಟ ವಿಸ್ತರಣೆಗೆ ಹೈ ಕಮಾಂಡ್ ಕೂಡಾ ಗ್ರೀನ್ ಸಿಗ್ನಲ್ ನೀಡಿದೆ. ಶಿವರಾತ್ರಿ, ಮಾ. 11 ರಿಂದ 13 ರ ವರೆಗೆ ಬೆಳಗಾವಿಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನ ಮುಗಿಸಿಕೊಂಡು ಸಚಿವರ ಪಟ್ಟಿಯತ್ತ ಸಿಎಂ ಹಾಗೂ ಪಕ್ಷದ ವರಿಷ್ಠರು ಕಣ್ಣು ಹಾಯಿಸಲಿದ್ದಾರೆ. ಪಕ್ಷದಿಂದ ಪಕ್ಷಕ್ಕೆ ಹಾರುವ ಸ್ವತಂತ್ರ ಜನಪ್ರತಿನಿಧಿ ವರ್ತೂರು ಪ್ರಕಾಶ್ ಸೇರಿದಂತೆ ಪಕ್ಷದ ಹಳೆ ಹುಲಿಗಳಿಗೆ ಈ ಬಾರಿ ಅವಕಾಶ ನೀಡಲು ಕರ್ನಾಟಕ ಬಿಜೆಪಿ ಸಿದ್ಧವಾಗಿದೆ.

ಸಚಿವರ ಆಯ್ಕೆ ವಿಷಯದಲ್ಲಿ ಯಡಿಯೂರಪ್ಪ ಅವರಿಗೆ ಕೊಂಚ ಇರಸು ಮುರುಸಾದರೂ ವಿಧಿವಿಲ್ಲದೆ ಬೇಕಾದವರು ಬೇಡದವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕಿದೆ. ವರ್ತೂರು ಪ್ರಕಾಶ್, ಅಪ್ಪಚ್ಚುರಂಜನ್, ರಾಜೂ ಗೌಡ, ಸಿ.ಟಿ.ರವಿ, ಸೊಗಡು ಶಿವಣ್ಣ, ಸೇರಿದಂತೆ ಒಟ್ಟು ಆರು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಕಚೇರಿಯಿಂದ ಹರಿದು ಬಂದ ಸದ್ಯದ ಸುದ್ದಿ. ಮುಂದಿನ ಬದಲಾವಣೆಗೆ ನಿರೀಕ್ಷಿಸಿ.

English summary
Karnataka Chief Minister BS Yeddyurappa has got green signal for much awaited Karnataka cabinet expansion. CM BSY is waiting for auspicious date after Maha Shivaratri and Vishwa Kannada Sammelana. As of Now March.14 is fixed for inclusion of six MLAs into Cabinet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X