ಯಡಿಯೂರಪ್ಪ ಅಧಿಕಾರ ಕಾಲ ಮುಗಿಯಿತು: ಜ್ಯೋತಿಷಿ

CM BSY fate prediction
ಬೆಂಗಳೂರು, ಮಾ.1: ಇತ್ತೀಚೆಗೆ ಹುಟ್ಟುಹಬ್ಬ ಆಚರಿಸಿಕೊಂಡ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಮೊಗದಲ್ಲಿ ಸಂತಸದ ಜೊತೆಗೆ ಆತಂಕದ ಛಾಯೆ ಆವರಿಸಿದೆ. ಪ್ರತಿಯೊಂದು ಹೆಜ್ಜೆಯನ್ನು ಜ್ಯೋತಿಷಿಗಳ ಲೆಕ್ಕಾಚಾರದಂತೆ ಇಡುವ ಮುಖ್ಯಮಂತ್ರಿಗಳಿಗೆ ತಮ್ಮ ಕುರ್ಚಿ ಇನ್ನು ಹೆಚ್ಚು ಕಾಲ ಭದ್ರ ಇಲ್ಲ ಎಂಬ ಕಹಿ ಸತ್ಯ ಅರಗಿಸಿಕೊಳ್ಳುವುದು ಕಷ್ಟವಾಗಿದೆ. ಸಿಎಂ ಅವರ ಕುಟುಂಬದ ಜ್ಯೋತಿಷಿ ವೇದ ಬ್ರಹ್ಮ ಭಾನುಪ್ರಕಾಶ್ ಶರ್ಮಾ ಅವರು ಹೇಳಿರುವ ಭವಿಷ್ಯವಾಣಿಯಂತೆ ಯಡಿಯೂರಪ್ಪ ಅವರು ಅಧಿಕಾರ ಕಳೆದೆಕೊಳ್ಳುವ ಸಮಯ ಸನ್ನಿಹಿತವಾಗಿದೆ. [ಪ್ರಸ್ತುತ ರಾಜಕೀಯ ಬೆಳವಣಿಗೆ : ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು]

ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಸಂಕಷ್ಟಗಳನ್ನು ಎದುರಿಸುತ್ತಲೇ ಇದೆ. ಎದುರಾದ ಪ್ರತಿ ಕಷ್ಟಗಳನ್ನು ಅಗ್ನಿ ಪರೀಕ್ಷೆ ಎಂದು ಸ್ವೀಕರಿಸಿ ಗೆದ್ದ ಮುಖ್ಯಮಂತ್ರಿಗಳಿಗೆ ಮುಂದಿನ ದಿನಗಳಲ್ಲಿ ಆ ಶಕ್ತಿ ಇರುವುದಿಲ್ಲ. ಮೇ 10 ರಿಂದ ಜೂನ್ 10ರವರೆಗೆ ಯಡಿಯೂರಪ್ಪನವರಿಗೆ ಕೆಟ್ಟ ಕಾಲವಿರುತ್ತದೆ. ಈ ಸಂದರ್ಭದಲ್ಲಿ ಅವರು ಅಧಿಕಾರ ಕಳೆದುಕೊಳ್ಳುವ ಸಾಧ್ಯತೆ ಬಹುತೇಕ ಖಚಿತ ಎಂದು ಜ್ಯೋತಿಷಿ ಶರ್ಮಾ ಭವಿಷ್ಯ ನುಡಿದಿದ್ದಾರೆ.

ಕರ್ನಾಟಕ ಪ್ರೀಮಿಯರ್ ಲೀಗ್ : ಯಡ್ಡಿ vs ರಾಜ್ಯಪಾಲ

ವಾಮಾಚಾರ ವಿಚಾರ: ಮುಖ್ಯಮಂತ್ರಿಗಳ ವಿರುದ್ಧ ವಿರೋಧ ಪಕ್ಷಗಳು ವಾಮಾಚಾರ ನಡೆಸಿಲ್ಲ. ಸಿಎಂ ಅವರ ಆಪ್ತ ವಲಯ ಹಾಗೂ ಬಿಜೆಪಿ ಪಕ್ಷದಿಂದಲೇ ವಾಮಾಚಾರ ನಡೆದಿದೆ. ಮುಂದಿನ ಚಂದ್ರಗ್ರಹಣ ಕಾಲದಲ್ಲಿ ಮುಖ್ಯಮಂತ್ರಿಗಳ ರಾಶಿಯ ಮೇಲೆ ಗ್ರಹಗಳು ನೀಚ ದೃಷ್ಟಿ ಬೀರಿದ್ದು, ಯಡಿಯೂರಪ್ಪ ಅವರು ಕೆಳಗಿಳಿಯುತ್ತಾರೆ. ಜೂ. 15ರೊಳಗೆ ಮಧ್ಯಂತರ ಚುನಾವಣೆ ನಡೆಯುವುದು ಅನಿವಾರ್ಯ ಎಂದು ಭಾನು ಪ್ರಕಾಶ್ ಹೇಳಿದ್ದಾರೆ.

ಆತ್ಮವಿಶ್ವಾಸಿ ಯಡಿಯೂರಪ್ಪ : ಆದರೆ, ಚುನಾವಣೆ ಮೇಲೆ ಕಣ್ಣೆಟ್ಟುಕೊಂಡೇ ಬಜೆಟ್ ಮಂಡಿಸಿದ ಯಡಿಯೂರಪ್ಪ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರೆಯುವ ಕನಸು ಕಾಣುತ್ತಿದ್ದಾರೆ. ಇನ್ನೊಂದೆಡೆ ಭ್ರಷ್ಟಾಚಾರ, ಕಾನೂನು ಸಮರ ಮುಂದುವರೆದಿದ್ದು, ಇದು ಸ್ವಲ್ಪ ಮಟ್ಟಿಗೆ ಸಿಎಂಗೆ ಮುಳುವಾಗಬಹುದು. ಆಧ್ಯಾತ್ಮಿಕ ಗುರು ಚಂದ್ರಶೇಖರ ಜ್ಯೋತಿಷಿ ಅವರನ್ನು ಭೇಟಿ ಮಾಡಿ ಬಂದಿರುವ ಸಿಎಂ, ಗ್ರಹಗಳನ್ನು ಹತೋಟಿಗೆ ತರಲು ಬೇಕಾದ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+