ಹೈಟೆಕ್ ವೇಶ್ಯಾವಾಟಿಕೆ : ಹೆಜ್ಮಾಡಿ ಯುವಕ ಸೆರೆ

Hitech Prostitution Hejamadi youth held
ಮಂಗಳೂರು, ಫೆ.25 : ಅಂತರ್ಜಾಲ ಮೂಲಕ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಸ್ಥಳೀಯ ಪೊಲೀಸರ ನೆರವಿನಿಂದ ಆಂಧ್ರ ಪೊಲೀಸರು ಭೇದಿಸಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡ ಸಿಟಿ ಸೈಬರ್ ಅಪರಾಧ ಪತ್ತೆ ವಿಭಾಗದ ಪೊಲೀಸರು ಹೆಜಮಾಡಿ ಸಮೀಪದ ಕಡವಿನಬಾಗಿಲು ನಿವಾಸಿ ಸಂದೇಶ್ ಶೆಟ್ಟಿ(30) ಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಹೆಜಮಾಡಿ ದಾಬಾ ಬಳಿಯಿರುವ ಮನೆಯೊಂದರ ದಾಳಿ ಮಾಡಿದ ಪೊಲೀಸರು ಪ್ರಮುಖ ಆರೋಪಿ ಸಂದೇಶ್ ಶೆಟ್ಟಿಯನ್ನು ಬಂಧಿಸಿದರು. ಆ ನಂತರ ಆತ ನೀಡಿದ ಮಾಹಿತಿಯಂತೆ ಆತನ ಸೇಹಿತ ಮಿತ್ರದಾಸ್ ಎಂಬಾತನನ್ನು ಬಂಧಿಸಿ ಹೆಚ್ಚಿನ ವಿಚಾರಣೆ ಆಂಧಪ್ರದೇಶಕ್ಕೆ ಕೊಂಡೊಯ್ದಿದ್ದಾರೆ ಎಂದು ಮಂಗಳೂರು ನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂದೇಶ್ ಶೆಟ್ಟಿ ಮತ್ತು ಮಿತ್ರದಾಸ್ ಇಂಟರ್‌ನೆಟ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ, ವೇಶ್ಯಾವಾಟಿಕೆ ನಡೆಸುತ್ತಿದರು ಎಂದು ಆರೋಪಿಸಲಾಗಿದೆ. ಸಂದೇಶ್ ಶೆಟ್ಟಿ ಮತ್ತಿತ್ತರರು ಹುಡುಗಿಯನ್ನು ಸರಬರಾಜು ಮಾಡುವುದಾಗಿ ಹೇಳಿ 10 ಸಾವಿರ ರು ಪಡೆದು ಮೋಸ ಮಾಡಿದ್ದಾರೆ ಎಂದು ಆಂಧ್ರ ಪ್ರದೇಶದ ಪಾಂಡುರಂಗ ರಾವ್ ಎಂಬವರ ಪುತ್ರ ಶ್ರೀನಿವಾಸ ರಾವ್ ಎಂಬುವವರು ದೂರು ನೀಡಿದ್ದರು.

"ನನ್ನ ಖಾತೆಗೆ ಹಣ ಬರುತ್ತಿದ್ದುದು ಸತ್ಯ. ಆದರೆ ಅದರ ಹಿನ್ನೆಲೆ ನನಗೆ ತಿಳಿದಿಲ್ಲ . ನನಗೂ ಆ ಹಣಕ್ಕೂ ಯಾವುದೇ ಸಂಬಂಧವಿಲ್ಲ . ನನ್ನ ಖಾತೆಗೆ ಜಮೆಯಾಗುತ್ತಿದ್ದ ಹಣವನ್ನು ನಾನು ಗೆಳೆಯ ಮಿತ್ರದಾಸ್ ಖಾತೆಗೆ ವರ್ಗಾಯಿಸುತ್ತಿದ್ದ. ಆತ ಅದನ್ನು ಬೆಂಗಳೂರಿನ ರಾಹುಲ್ ಎಂಬಾತನ ಖಾತೆಗೆ ವರ್ಗಾಹಿಸುತ್ತಿದ್ದ'' ಎಂದು ಅಮಾಯಕನಂತೆ ಫೋಸು ಕೊಡುವ ಸಂದೇಶ್ ಶೆಟ್ಟಿ ಹೇಳಿದ್ದಾನೆ.

ನಕಲಿ ಬ್ಯಾಂಕ್ ಖಾತೆ: ಆದರೆ ರಾಹುಲ್ ಎಂಬ ವ್ಯಕ್ತಿಯೇ ಇಲ್ಲ ಎಂಬ ಸಂಶಯ ಕಾಡುತ್ತಿದೆ. ಸಂದೇಶನೇ ರಾಹುಲ್ ಎಂಬ ಹೆಸರಿನಲ್ಲಿ ಬೆಂಗಳೂರಿನ ಆರ್ ಟಿ ನಗರದ ಐಸಿಐಸಿಐ ಬ್ಯಾಂಕಿನಲ್ಲಿ ಖಾತೆ ಆರಂಭಿಸಿದ್ದ. ಅಲ್ಲದೆ, 2009ರಲ್ಲಿ , ಹೆರಾಯಿನ್ ಸಾಗಾಟ ಪ್ರಕರಣವೊಂದರಲ್ಲಿ ಪಡುಬಿದ್ರಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಆ ನಂತರ ಮಾದಕವಸ್ತು ಸಾಗಾಟ, ವೇಶ್ಯಾವಾಟಿಕೆಯಂತಹ ಕ್ರಿಮಿನಲ್ ದಂಧೆಯಲ್ಲಿ ತೊಡಗಿದ್ದ. ಮಿತ್ರದಾಸ್ ಕೂಡ ಹಲವಾರು ಅಪರಾಧ ಪ್ರಕರಣಗಳಲ್ಲಿ ಗುರುತಿಸಿಕೊಂಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಲ್ಯಾನ್ಸರ್ ಕಾರಿನಲ್ಲಿ ತಿರುಗಾಡುತ್ತಿದ್ದ ಈತ ಸ್ಥಳೀಯ ಹುಡುಗಿರನ್ನು ಚುಡಾಯಿಸುವ ಕೆಲಸ ಮಾಡಿಕೊಂಡಿದ. ರಾತ್ರಿ ವೇಳೆ ಮನೆ ಬಿಟ್ಟರೆ ಬೆಳಿಗ್ಗೆ ಹೊತ್ತಿಗೆ ಮನೆ ಸೇರುತ್ತಿದ್ದ. ಈತನ ಚಟುವಟಿಕೆ ನಿಗೂಢವಾಗಿರುತ್ತಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+