ದಕ್ಷ ಅಧಿಕಾರಿಯ ಮೇಲೆ ಕಾರ್ಪೊರೇಟರ್ ದೈಹಿಕ ಹಲ್ಲೆ

ಪೀಣ್ಯದ ಸಿದ್ಧ ಉಡುಪು ಕಾರ್ಖಾನೆಯ ಶೌಚಾಲಯ ಗುಂಡಿಯ ನೀರನ್ನು ಶುದ್ಧೀಕರಿಸಿದ ನೀರಿನ ಘಟಕಕ್ಕೆ ತಂದು ಸುರಿಯುವ ಕೆಲಸದಲ್ಲಿ ಈ ತಂಡ ನಿರತವಾಗಿತ್ತು. ಪ್ರತಿ ಭಾನುವಾರವೂ ಈ ದಂದೆ ನಡೆಯುತ್ತಿದೆ ಎಂಬ ಮಾಹಿತಿ ಪಡೆದ ಸಿಂಗ್, ಮಧ್ಯಾಹ್ನ ಒಬ್ಬಂಟಿಯಾಗಿ ಹೋಗಿ ಆರೋಪಿಗಳಿಗೆ ತಡೆ ಒಡ್ಡಿದ್ದರು.
'ಕೊಳಚೆ ನೀರು ಹೊತ್ತು ತಂದಿದ್ದ ಲಾರಿಯ ಕೀ ಕಸಿದುಕೊಳ್ಳಲು ಮುಂದಾದ ತಮ್ಮನ್ನು ಕೆಳಗೆ ತಳ್ಳಿದ ದುಷ್ಕರ್ಮಿಗಳು, ಕಬ್ಬಿಣದ ಸರಳಿನಿಂದ ಹಲ್ಲೆ ಮಾಡಿದರು. ಲಾರಿಯನ್ನು ಹಿಮ್ಮುಖವಾಗಿ ಚಲಾಯಿಸಿ, ಕೊಲೆಗೂ ಯತ್ನಿಸಿದರು' ಎಂದು ಸಿಂಗ್ ಹೇಳಿದ್ದಾರೆ.
ತಪ್ಪಿಸಿಕೊಂಡ ಸಿಂಗ್, ಕೊಚ್ಚಿ ಪ್ರವಾದಲ್ಲಿದ್ದ ಲೋಕಾಯುಕ್ತ ಸಂತೋಷ್ ಹೆಗಡೆ ಅವರಿಗೆ ತಕ್ಷಣ ಫೋನ್ ಮಾಡಿ ವಿಷಯ ತಿಳಿಸಿದರು. ಬಳಿಕ ಅಮೃತಹಳ್ಳಿ ಠಾಣೆಗೆ ತೆರಳಿ ದೂರು ದಾಖಲಿಸಿದರು. ಸುದ್ದಿ ತಿಳಿದು ನಗರಕ್ಕೆ ವಾಪಸಾದ ಲೋಕಾಯುಕ್ತರ ನಿವಾಸಕ್ಕೆ ಭೇಟಿ ನೀಡಿದ ಸಿಂಗ್ ಘಟನೆ ಕುರಿತು ವಿವರಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಅರಣ್ಯ ಸಚಿವ ಸಿ.ಎಚ್. ವಿಜಯ ಶಂಕರ್, ಸಿಂಗ್ ಅವರ ಮನೆಗೆ ರಾತ್ರಿಯೇ ತೆರಳಿ ಚೆರ್ಚೆ ನಡೆಸಿದರು.











Click it and Unblock the Notifications