ಶಿಕ್ಷಕರಿಗಾಗಿ ಉಪವಾಸ, ಅಸ್ವಸ್ಥಗೊಂಡ ಹೊರಟ್ಟಿ

ಹೊರಟ್ಟಿಯವರಿಗೆ ರಕ್ತದೊತ್ತಡ ಹೆಚ್ಚಾಗಿ ಜ್ವರ ಕಾಣಿಸಿಕೊಂಡಿದ್ದರೆ, ಇನೊಬ್ಬ ಹಿರಿಯ ಶಿಕ್ಷಕ ಎನ್.ಎಂ.ಅಮಾತಿ ಎಂಬುವವರು ತೀವ್ರವಾಗಿ ಅಸ್ವಸ್ಥಗೊಂಡಿದ್ದರಿಂದ ಪೊಲೀಸರು ಬಲತ್ಕಾರದಿಂದ ಪ್ರತಿಭಟನಕಾರರ ವಿರೋಧವನ್ನು ಲೆಕ್ಕಿಸದೆ ಶಿಕ್ಷಕ ಎನ್.ಎಂ.ಅಮಾತಿಯವರನ್ನು ಆಸ್ಪತ್ರೆಗೆ ದಾಖಲಿಸಿದರು.
ಆ ಸಂದರ್ಭದಲ್ಲಿ ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ತೀವ್ರ ವಾಗ್ವಾದ ನಡೆದ್ದಿದ್ದರಿಂದ ಸ್ವಲ್ಪ ಹೊತ್ತು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೊರಟ್ಟಿಯವರು, ಸರಕಾರ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವವರಿಗೂ ಯಾವುದೇ ಕಾರಣಕ್ಕೂ ಧರಣಿಯನ್ನು ಹಿಂದೆಗೆದುಕೊಳ್ಳುವುದಿಲ್ಲ. ಕಳೆದ 48 ಗಂಟೆಗಳಿಂದ ಶಿಕ್ಷಕರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಸರಕಾರ ಯಾವುದೆ ಗಂಭೀರ ಚಿಂತನೆ ನಡೆಸದಿರುವುದು ದುರಂತ ಎಂದಿದ್ದಾರೆ.
ಸೀರೆ ಹಂಚಿಕೆ ಮುಂತಾದ ಜನಪ್ರಿಯ ಯೋಜನೆಗಳಿಗೆ ಹಣ ಒದಗಿಸಿಕೊಳ್ಳುವ ಸರ್ಕಾರಕ್ಕೆ ಶಿಕ್ಷಕರ ಕೂಗು ಕೇಳುತ್ತಿಲ್ಲ. ಸುಮಾರು 1,100 ಅನುದಾನಿತ ಶಾಲೆಗಳ 10,000 ಶಿಕ್ಷಕರಿಗೆ ಇನ್ನೂ ಸಂಬಳ ಸಿಕ್ಕಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಹೊರಟ್ಟಿ ಸ್ಪಷ್ಟಪಡಿಸಿದ್ದಾರೆ.
ಪ್ರಾಥಮಿಕ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಎಂಎಲ್ ಎ ಚಂದ್ರಕಾಂತ ಬೆಲ್ಲದ್, ಎಂಎಲ್ ಸಿ ಮೋಹನ ಲಿಂಬಿಕಾಯಿ ಅವರು ಹೊರಟ್ಟಿ ಅವರ ಮನವೊಲಿಸಲು ಪ್ರಯತ್ನಪಟ್ಟು ಸೋತಿದ್ದಾರೆ.











Click it and Unblock the Notifications