ಪುತ್ತೂರು ಎಎಸ್ ಪಿ ಅಮಿತ್ ಔಟ್, ಡಾ. ರೋಹಿಣಿ ಇನ್

Dr. Rohini katoch, IPS
ಪುತ್ತೂರು, ಫೆ.14: ಎಎಸ್ ಪಿ ಅಮಿತ್ ಸಿಂಗ್ ಅವರ ವಿವಾದಕ್ಕೆ ವರ್ಗಾವಣೆ ಮೂಲಕ ಉತ್ತರ ದೊರಕಿದೆ. ಅವರ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ನೂತನ ಎ.ಎಸ್.ಪಿಯಾಗಿ 2008 ನೇ ಜಾರ್ಖಂಡ್ ಶ್ರೇಣಿಯ ಐಪಿಎಸ್ ಅಧಿಕಾರಿ ಡಾ. ರೋಹಿಣಿ ಕಾಟೋಚ್ ನೇಮಕವಾಗಿದ್ದಾರೆ.

ಬಿಜೆಪಿ ಮುಖಂಡರೊಬ್ಬರಿಗೆ ಕಪಾಳಮೋಕ್ಷ ಮಾಡಿದ ಆರೋಪದಲ್ಲಿ ವರ್ಗಾವಣೆಗೆ ಒಳಗಾಗಿದ್ದ ಅಮಿತ್ ಸಿಂಗ್ ಅವರಿಗೆ ಭಡ್ತಿ ನೀಡಲಾಗಿದ್ದು, ಅವರನ್ನು ಬೆಂಗಳೂರಿನ ಸೀನಿಯರ್ ಎ.ಎಸ್.ಪಿಯಾಗಿ ನೇಮಿಸಲಾಗಿದೆ ಎಂದು ದಕ್ಷಿಣ ಕನ್ನಡ ಪೊಲೀಸ್ ವಕ್ತಾರರು ಹೇಳಿದ್ದಾರೆ.

ರೋಹಿಣಿ ಕಾಟೋಚ್ ಅವರು ಎಂಬಿಬಿಎಸ್ ಪದವಿಧರೆಯಾಗಿದ್ದು, 2008ರಲ್ಲಿ ಭಾರತೀಯ ಪೊಲೀಸ್ ಇಲಾಖೆ ಜಾರ್ಖಂಡ್ ವಿಭಾಗವನ್ನು ಸೇರಿದರು. ಹಿಮಾಚಲ ಪ್ರದೇಶ ಮೂಲದವರ ರೋಹಿಣಿ, ಹೈದರಾಬಾದಿನ ರಾಷ್ಟ್ರೀಯ ಪೊಲೀಸ್ ಅಕಾಡೆಮಿ, ಉಡುಪಿ ಜಿಲ್ಲಾ ಪೊಲೀಸ್ ಕೇಂದ್ರ ಮುಂತಾದೆಡೆ ತರಬೇತಿ ಪಡೆದಿದ್ದಾರೆ.2010ರ ಸೆಪ್ಟೆಂಬರ್ ನಿಂದ ಭಟ್ಕಳ ಉಪವಿಭಾಗದ ಎಎಸ್ ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಎಎಸ್ ಪಿ ಅಮಿತ್ ಟಫ್ ಕಾಪ್ : ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೋವಿಂದ ಪ್ರಭು ಅವರಿಗೆ ಪೊಲೀಸರಿಂದ ಕಪಾಳ ಮೋಕ್ಷ ಘಟನೆ ನಡೆದಿತ್ತು. ಬಿಜೆಪಿ ನಾಯಕರುಗಳು ಸುಮಾರು 200 ಜನ ಕಾರ್ಯಕರ್ತರನ್ನು ಕರೆದುಕೊಂಡು ಪುತ್ತೂರು ಎಎಸ್ ಪಿ ಅಮಿತ್ ಸಿಂಗ್ ಅವರಲ್ಲಿದ ಸಮಯದಲ್ಲಿ ಅವರ ಮನೆ ಮುಂದೆ ಧರಣಿ ನಡೆಸಿ ಅಮಾನವೀಯವಾಗಿ ನಡೆದುಕೊಂಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಸಂಸದ ನಳಿನ್ ಹಾಗೂ ಶಾಸಕಿ ಮಲ್ಲಿಕಾ ಪ್ರಸಾದ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಎಎಸ್ ಪಿ ಅಮಿತ್ ಮುಂದಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+