ರಾಜಾನ ಲಂಚದ ಮೊತ್ತ ಎಣಿಸಲು ಆಗೋಲ್ಲ
ನವದೆಹಲಿ,
ಫೆ.11: 20ನೇ ಶತಮಾನದ ಬಹುದೊಡ್ಡ ಹಗರಣ ಎಂದೇ ಕುಖ್ಯಾತಿ ಗಳಿಸಿರುವ 2ಜಿ ತರಂಗ ಗುಚ್ಛ ಹಂಚಿಕೆ ಅವ್ಯವಹಾರದಿಂದ 1.76 ಲಕ್ಷ ಕೋಟಿ ನಷ್ಟ(CAG ವರದಿಯಂತೆ) ಎಂಬ ಮೊತ್ತ ಕೇಳಿ ಎಲ್ಲರೂ ಹುಬ್ಬೇರಿಸಿದ್ದರು. ಈಗ ಈ ಎಲ್ಲಾ ಕಳ್ಳ ವ್ಯವಹಾರಗಳ ಸೂತ್ರಧಾರ ಕೇಂದ್ರದ ಮಾಜಿ ಸಚಿವ ಎ ರಾಜಾ 3 ಸಾವಿರ ಕೋಟಿ ಲಂಚ ಪಡೆದಿದ್ದಾರೆ ಎಂದು ಸಿಬಿಐ ಮಾಹಿತಿ ಹೊರಹಾಕಿದೆ. id="toptextpromo">ಟೆಲಿಕಾಂ
ನೀತಿಯನ್ನು ಮನಬದಂತೆ ತಿರುಚಿ, ಒಂದೆರಡು ಖಾಸಗಿ ಕಂಪೆನಿಗಳಿಗೆ ಅನುಕೂಲ ಮಾಡಿಕೊಟ್ಟು 3,000 ಕೋಟೀ ಲಂಚ ಪಡೆದಿದ್ದಾರೆ. ತನಿಖಾ ಪ್ರಗತಿ ವರದಿಯಲ್ಲೇ ಈ ಮಟ್ಟದ ಲಂಚ ಹರಿದಾಡಿದ್ದು, ಪೂರ್ಣ ವರದಿ ಲಭ್ಯವಾಗುವ ವೇಳೆಗೆ ಇನ್ನೆಷ್ಟು ಸಿಗಬಹುದು ಎಂದು ಸಿಬಿಐ ಅಧಿಕಾರಿಗಳು ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>2008
ಜನವರಿಯಲ್ಲಿ ರಾಜಾ ಅವರು 2 ಜಿ ಅನುಮತಿ ಕಟ್ ಆಫ್ ಡೇಟ್ ಅನ್ನು ಮುಂದೂಡಿದ ಕಾರಣ ಎರಡು ಸಂಸ್ಥೆಗಳಿಂದ ಭಾರಿ ಮೊತ್ತ ಪಡೆದಿದ್ದಾರೆ. ಈ ಲಂಚದ ಮೊತ್ತ ಹಗರಣದ ಮೊತ್ತವಾದ 1.76 ಲಕ್ಷ ರೂ.ನಷ್ಟದ ಮೊತ್ತಕ್ಕೂ ಇದಕ್ಕೂ ಸಂಬಂಧವಿಲ್ಲ. ಕೇವಲ 40 ರಿಂದ 50 ಸಾವಿರ ಕೋಟಿ ರೂ.ಗಳ ಸ್ಪೆಕ್ಟ್ರಮ್ ಹಂಚಿಕೆಯಲ್ಲಿ ನಡೆದ ಅವ್ಯವಹಾರದಲ್ಲಿ ಬಂದ ದುಡ್ಡು. ಮಾರ್ಚ್ 31 ರೊಳಗೆ ಎಲ್ಲಾ ಮಾಹಿತಿ ಕಲೆ ಹಾಕಿ ಆರೋಪ ಪಟ್ಟಿ ಸಲ್ಲಿಸಲು ಸಿಬಿಐ ಸಿದ್ಧತೆ ನಡೆಸಿದ್ದು, ರಾಜಾ ಪಡೆದ ಲಂಚದ ಮೊತ್ತದ ಲೆಕ್ಕ ಸಂಪೂರ್ಣವಾಗಿ ಸಿಗಲಿದೆ.











Click it and Unblock the Notifications