ಬಳ್ಳಾರಿ ಜಿಲ್ಲಾಧಿಕಾರಿ ಶಿವಪ್ಪ ದಿಢೀರ್ ವರ್ಗಾವಣೆ
ಬಳ್ಳಾರಿ,
ಫೆ. 9: ಬಳ್ಳಾರಿ ಜಿಲ್ಲಾಧಿಕಾರಿ ಬಿ. ಶಿವಪ್ಪ ಅವರು ದಿಢೀರನೆ ವರ್ಗಾವಣೆ ಆಗಿದ್ದು, ಇವರ ವರ್ಗಾವಣೆ ಆದೇಶವನ್ನು ಇ-ಮೇಲ್ ಮೂಲಕ ರವಾನೆ ಆಗಿದೆ. ಚಿತ್ರದುರ್ಗ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಇಲ್ಲಿಗೆ ವರ್ಗವಾಗಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಮೂಲಗಳು ಈ ವಿಷಯ ದೃಢಪಡಿಸಿದ್ದು, ಬಿ. ಶಿವಪ್ಪ ಅವರಿಗೆ ಹೊಸ ಹುದ್ದೆಯನ್ನು ತೋರಿಸಿಲ್ಲ. id="toptextpromo">ಬಿ.
ಶಿವಪ್ಪ ಅವರು ಅಕ್ಟೋಬರ್ 2011 ರ ಕೊನೆಯಲ್ಲಿ ಸೇವೆಯಿಂದ ನಿವೃತ್ತಿ ಹೊಂದಲಿದ್ದರು. ಇವರು ಸಚಿವ ಬಿ. ಜನಾರ್ದನರೆಡ್ಡಿ ಅವರ ವಿಶ್ವಾಸರ್ಹ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದರು. ಆದರೆ, ಸಂಸದೆ ಜೆ. ಶಾಂತ ಅವರ ಆಯ್ಕೆಯ ಹಿನ್ನಲೆಯಲ್ಲಿ ಹೈಕೋರ್ಟ್‌ನಿಂದ ತೀವ್ರ ತರಾಟೆಗೆ ಗುರಿ ಆಗಿದ್ದರು. id='are-slot-1' class='oiad oi-axt oiadv'> id='top-searched-articles'>ಇವರು
2 ಬಾರಿ ವರ್ಗ ಆಗಿದ್ದಾಗ ಜಿ. ಜನಾರ್ದನರೆಡ್ಡಿ ಅವರೇ ಪ್ರತಿಷ್ಠೆಯಾಗಿ ಪರಿಗಣಿಗಿಸಿ ವರ್ಗಾವಣೆಯನ್ನು ರದ್ದುಗೊಳಿಸುವಲ್ಲಿ ಯಶಸ್ವಿ ಆಗಿದ್ದರು. ಬಿ. ಶಿವಪ್ಪ ಅವರು ಜುಲೈ 17, 2008 ರಂದು ಬಳ್ಳಾರಿ ಡಿಸಿ ಆಗಿ ಅಧಿಕಾರ ಸ್ವೀಕರಿಸಿದ್ದರು.











Click it and Unblock the Notifications