ಮಹಾತ್ಮಾ ಗಾಂಧಿ: ಟೈಮ್ಸ್‌ನ ರಾಜಕೀಯ ಮೇರು ವ್ಯಕ್ತಿ
ನ್ಯೂಯಾರ್ಕ್,
ಫೆ. 7: ವಿಶ್ವದ ಸಾರ್ವಕಾಲಿನ 25 ಮೇರು ವ್ಯಕ್ತಿಗಳ ಪೈಕಿ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಮೊದಲ ಸ್ಥಾನದಲ್ಲಿ ರಾರಾಜಿಸುತ್ತಾರೆ ಎಂದು ಅಮೆರಿಕದ ಟೈಮ್ಸ್ ಪತ್ರಿಕೆಯು ಘೋಷಿಸಿದೆ. ಜತೆಗೆ ಮೊಘಲ್ ಚಕ್ರವರ್ತಿ ಅಕ್ಬರ್, ಬೌದ್ಧ ಗುರು ದಲಾಯಿ ಲಾಮಾ, ಆಧುನಿಕ ಚೀನಾದ ಪಿತಾಮಹ ಮಾವೊ ಜಿಯಾಂಗ್, ಮಹಾರಾಜ ಅಲೆಕ್ಸಾಂಡರ್ ಸಹ ಈ ಪಟ್ಟಿಯಲ್ಲಿ ದಾಖಲಾಗಿದ್ದಾರೆ. id="toptextpromo">ಅಮೆರಿಕದ
ಅಧ್ಯಕ್ಷ ರೊನಾಲ್ಡ್ ರೇಗನ್ ಅವರ 100ನೇ ಜನ್ಮದಿನದ ಸ್ಮರಣಾರ್ಥ ಬಿಡುಗಡೆಗೊಂಡಿರುವ 'ಟೈಮ್ಸ್' ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಕುಖ್ಯಾತ ಅಡಾಲ್ಫ್ ಹಿಟ್ಲರ್, ಮುಸಲೋನಿ ಸಹ ಸ್ಥಾನ ಪಡೆದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಹಿಂಸಾ
ತತ್ತ್ವದ ಪ್ರತಿಪಾದಕ ಗಾಂಧೀಜಿ ಅವರು ಕೈಗೊಳ್ಳುತ್ತಿದ್ದ ಸತ್ಯಾಗ್ರಹಗಳು, ಭಾರತದ ಸ್ವಾತಂತ್ಯ್ರಕ್ಕಾಗಿ ಅವರು ಅರ್ಪಿಸಿಕೊಂಡಿದ್ದು ಚಿರಸ್ಮರಣೀಯ. ಇದು ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಕ್ಕೂ ಸ್ಫೂರ್ತಿ ನೀಡಿದೆ. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಇತ್ತೀಚೆಗೆ ಬರಾಕ್ ಒಬಾಮಾ ಸಹ ಗಾಂಧಿ ಮೋಡಿಗೆ ಒಳಗಾಗಿದ್ದಾರೆ ಎಂದು ಪ್ರತಿಷ್ಠಿತ ಟೈಮ್ಸ್ ಪತ್ರಿಕೆ ಗಾಂಧೀಜಿಯವರನ್ನು ಕೊಂಡಾಡಿದೆ.











Click it and Unblock the Notifications