ಯಡಿಯೂರಪ್ಪ ವಿರುದ್ದ ಕ್ರಿಮಿನಲ್ ಮೊಕದ್ದಮೆ : ಸಿದ್ದು

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಅವರಿಗೆ ಕುರ್ಚಿ ಹೋಗುವ ದುಃಸ್ವಪ್ನ ಕಾಡುತ್ತಿದೆ. ರಾಜಕೀಯವಾಗಿ ಹತಾಶೆರಾಗಿದ್ದಾರೆ. ಭಯ, ತಪ್ಪು ಮಾಡಿದವರು ಮಾತ್ರ ಈ ರೀತಿ ಮಾಟ ಮಂತ್ರದ ಆಪಾದನೆ ಮಾಡಲು ಸಾಧ್ಯ ಎಂದರು. ನಾನು ಮಾಟ ಮಂತ್ರಿ ಮಾಡಿಸಿದ್ದರೆ ಆ ಬಗ್ಗೆ ದಾಖಲೆಗಳನ್ನು ಕೊಡಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.
ದೇವಸ್ಥಾನಗಳಿಗೆ ಆನೆ, ಕತ್ತೆ ನೀಡಿದ್ದು, ಮೈಸೂರು, ಕೇರಳ, ತಮಿಳುನಾಡಿನಲ್ಲಿ ಹೋಮ ಹವನ ಮಾಡಿಸಿದ್ದು ಯಡಿಯೂರಪ್ಪ ಎಂದ ಅವರು, ಯಡಿಯೂರಪ್ಪ ಅವರಿಗೆ ಮೌಢ್ಯತೆಯನ್ನು ನಂಬಿಕೆ ಇದ್ದರೆ ಅದು ಅವರಿಗೆ ಬಿಟ್ಟ ವಿಚಾರ. ಕುರ್ಚಿ ಉಳಿಸಿಕೊಳ್ಳುವ ಏಕೈಕ ಉದ್ದೇಶದಿಂದ ಮುಖ್ಯಮಂತ್ರಿಗಳು ವಿನಾಕಾರಣ ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ವೈಚಾರಿಕತೆಯಲ್ಲಿ ನಂಬಿಕೆ ಇಟ್ಟಿದ್ದೇನೆ. ಯಾವತ್ತೂ ಶಾಸ್ತ್ರ ಕೇಳಿಲ್ಲ. ಮನೆಯಲ್ಲಿ ಪೂಜೆ ಮಾಡಿಸಿಲ್ಲ. ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿ ಜಯ ಗಳಿಸಿದ್ದೇನೆ. ಚುನಾವಣೆ ಸಂದರ್ಭ ಬಿಟ್ಟರೆ ಎಂದೂ ದೇವಸ್ಥಾನಕ್ಕೆ ಹೋಗಿಲ್ಲ. ಮಾಢ್ಯಗಳನ್ನು ವಿರೋಧಿಸುತ್ತಾ ಬಂದಿದ್ದೇನೆ ಎಂದು ಸಿದ್ದರಾಮಯ್ಯ ವಿವರಿಸಿದರು.












Click it and Unblock the Notifications