ಹತ್ಯೆಗೆ ಸಿದ್ದು ತಂತ್ರ : ಯಡಿಯೂರಪ್ಪ ಆರೋಪ

ತಾಲೂಕಿನ ಸುತ್ತೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಅವರು ಅಲ್ಲಿನ ಹೆಲಿಪ್ಯಾಡ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಸಿದ್ದರಾಮಯ್ಯ ಎಷ್ಟಾದರೂ ವಾಮ ಮಾರ್ಗದಲ್ಲಿ ಅತ್ಯಂತ ಅನುಭವಿಯಾಗಿರುವ ಮಾಜಿ ಪ್ರಧಾನಿ ದೇವೇಗೌಡರ ಶಿಷ್ಯ. ಹಾಗಾಗಿ ಅವರು ಸಹ ಅದರಲ್ಲೆಲ್ಲ ಪಳಗಿರಬೇಕು. ಅದರಿಂದಲೇ ತನ್ನ ಸ್ಥಾನದ ಬಗ್ಗೆ ಅಷ್ಟು ಖಚಿತವಾಗಿ ಹೇಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಲೇವಡಿ ಮಾಡಿದರು.
ವಿರೋಧ ಪಕ್ಷಗಳು ಎಷ್ಟೇ ಕಿರುಕುಳ ಕೊಟ್ಟರೂ ಅದಕ್ಕೆ ಜಗ್ಗುವುದಿಲ್ಲ, ಬಗ್ಗುವುದೂ ಇಲ್ಲ. ರಾಜೀನಾಮೆ ಕೊಡು ಎಂದು ಕೇಳಲು ಇವರಾರು ಎಂದು ಪ್ರಶ್ನಿಸಿದ ಯಡಿಯೂರಪ್ಪ, ಹೈಕಮಾಂಡ್ ನನ್ನ ಪರವಾಗಿದೆ. ಶಾಸಕರು ನನ್ನೊಂದಿಗಿದ್ದಾರೆ. ಮುಂದಿನ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ ಎಂದು ಸ್ಪಷ್ಟಪಡಿಸಿದರು.
ಇತ್ತೀಚೆಗೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಮುಖಂಡರು ಸರಕಾರ ಪತನವಾಗಲಿದೆ ಎಂದು ಹೇಳುತ್ತಿರುವುದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಈ ರೀತಿ ಉತ್ತರಿಸಿದರು. (ಯಡಿಯೂರಪ್ಪ)












Click it and Unblock the Notifications