2ಜಿ ತರಂಗಗುಚ್ಛ ಹಂಚಿಕೆ : ನ್ಯಾ. ಶಿವರಾಜ್ ವರದಿ ಸಲ್ಲಿಕೆ

Justice Shivaraj V. Patil
ನವದೆಹಲಿ, ಜ. 31 : 2ಜಿ ತರಂಗಗುಚ್ಛ ಹಂಚಿಕೆಯ ಪ್ರಕ್ರಿಯೆಗೆ ಸಂಬಂಧಿಸಿದಂತೆ 2001ರಿಂದ 2009ರ ಅವಧಿಯಲ್ಲಿ ನಿಮಯಗಳನ್ನು ಗಾಳಿಗೆ ತೂರಲಾಗಿದೆಯೆ ಎಂಬ ಕುರಿತು ಪರಿಶೀಲನೆ ನಡೆಸಿರುವ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಅವರಿರುವ ಏಕಸದಸ್ಯ ಆಯೋಗ ಇಂದು ವರದಿ ಸಲ್ಲಿಸಿದೆ.

ಇಂದು ಬೆಳಿಗ್ಗೆ ಮಾಹಿತಿ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರಿಗೆ ವರದಿ ಸಲ್ಲಿಸಿರುವ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಸರಕಾರದ ಮಾರ್ಗದರ್ಶಿಯನ್ನು ಪಾಲನೆ ಮಾಡದ ದೂರಸಂಪರ್ಕ ಇಲಾಖೆಯ ಅಧಿಕಾರಿಗಳ ಹೆಸರುಗಳ ಪಟ್ಟಿ ಸಲ್ಲಿಸಿದ್ದಾರೆ. ಈ ವರದಿಯನ್ನು ಕಪಿಲ್ ಸಿಬಲ್ ಅವರು 'ನಿರ್ಭಯ'ದಿಂದ ಕೂಡಿದೆ ಎಂದು ಬಣ್ಣಿಸಿದ್ದಾರೆ.

2ಜಿ ತರಂಗಗುಚ್ಛವನ್ನು ಅನರ್ಹ ಕಂಪನಿಗಳಿಗೆ ಲಾಭವಾಗುವಂತೆ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿದ ಆರೋಪ ಹೊತ್ತಿರುವ ಡಿಎಂಕೆ ನಾಯಕ ಎ ರಾಜಾ ಅವರು ಕಳೆದ ನವೆಂಬರ್ ನಲ್ಲಿ ದೂರಸಂಪರ್ಕ ಸಚಿವರಾಗಿ ರಾಜೀನಾಮೆ ಸಲ್ಲಿಸಿದ್ದರು. ಈ ಹಗರಣದಿಂದಾಗಿ ಸರಕಾರದ ಬೊಕ್ಕಸಕ್ಕೆ 1.76 ಲಕ್ಷ ಕೋಟಿ ರು.ನಷ್ಟು ನಷ್ಟ ಸಂಭಿವಿಸಿತ್ತು.

ದೂರಸಂಪರ್ಕ ಇಲಾಖೆಯಿಂದ ಸಲ್ಲಿಸಲಾಗಿರುವ ದಾಖಲೆಗಳನ್ನು ಪರಿಶೀಲಿಸಿ, ತರಂಗಗುಚ್ಛ ಹಂಚಿಕೆಯ ಪ್ರಕ್ರಿಯೆಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ವರದಿ ಒಪ್ಪಿಸುವುದು ಮಾತ್ರ ನ್ಯಾಯಮೂರ್ತಿಗಳ ಅಧಿಕಾರ ಪರಿಮಿತಿಯಲ್ಲಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆಯನ್ನು ತಾವು ನಡೆಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಬೃಹತ್ ಭ್ರಷ್ಟಾಚಾರ ಸಂಕೋಲೆಯಲ್ಲಿ ಮತ್ತೆ ಯಾರ್ಯಾರು ಭಾಗಿಯಾಗಿದ್ದಾರೆಂಬುದರ ತನಿಖೆ ಸಿಬಿಐ ನಡೆಸುತ್ತಿದೆ. [2ಜಿ ಹಗರಣ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+