ಅಕ್ರಮ ಆಸ್ತಿ: ಎಚ್ಡಿಕೆ ವಿರುದ್ಧ ಲೋಕಾಯುಕ್ತರಿಗೆ ದೂರು

ಅಕ್ರಮ ಗಳಿಕೆ ಸಂಬಂಧ ಎಚ್ಡಿಕೆ ಅವರ ಸಹೋದರ ಎಚ್ ಡಿ ಬಾಲಕೃಷ್ಣ ಹೆಸರನ್ನೂ ದಾಖಲಿಸಲಾಗಿದೆ. ಜ.2005ರಿಂದ ಅ.2006ರವರೆಗೆ ಎಚ್ಡಿಕೆ ಕುಟುಂಬ ಸದಸ್ಯರು ಹಾಗೂ ಅವರ ನಾನಾ ಕಂಪನಿಗಳ ಬ್ಯಾಂಕ್‌ಗಳಿಗೆ ಅಕ್ರಮ ಹಣ ಸಂದಾಯವಾಗಿದೆ ಎಂದು ಧಾರವಾಡ ಕಲಘಟಕಿಯ ವಕೀಲ ಎಸ್ ಟಿ ತೆಗ್ಗಿಹಳ್ಳಿ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.
ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಮಟ್ಟದ ವಹಿವಾಟು ನಡೆಸಲು ಹೇಗೆ ಸಾಧ್ಯವಾಯಿತು ಎಂದು ತೆಗ್ಗಿಹಳ್ಳಿ ಪ್ರಶ್ನಿಸಿದ್ದಾರೆ. ಎಚ್ಡಿಕೆ ಕುಟುಂಬ ರಾಜ್ಯದ ಜನತೆಗೆ ದ್ರೋಹ ಬಗೆದಿದೆ. ಯಡಿಯೂರಪ್ಪ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಆದರೆ ತಮ್ಮ ದೂರಿನ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ತೆಗ್ಗಿಹಳ್ಳಿ ಸ್ಪಷ್ಟಪಡಿಸಿದ್ದಾರೆ.
ಎಚ್ಡಿಕೆ ವಿರುದ್ಧ ದೂರನ್ನು ಪರಿಶೀಲಿಸುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತಿಳಿಸಿದ್ದಾರೆ. ಎಚ್ಡಿಕೆ ಹಾಲಿ ಸಂಸದರಾಗಿರುವ ಕಾರಣ ಅವರ ವಿರುದ್ಧ ತನಿಖೆ ನಡೆಸಬಹುದೇ ಎಂಬುದನ್ನು ಸಮಾಲೋಚಿಸಿ ಮುಂದುವರೆಯುತ್ತೇವೆ. ಆದರೆ ಎಚ್ ಡಿ ಬಾಲಕೃಷ್ಣೇಗೌಡ ನಿವೃತ್ತ ಕೆ ಎ ಎಸ್ ಅಧಿಕಾರಿಯಾಗಿರುವ ಕಾರಣ ವಿಚಾರಣೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದಿದ್ದಾರೆ. [ಎಚ್ಡಿಕೆ]












Click it and Unblock the Notifications