Get Updates
Get notified of breaking news, exclusive insights, and must-see stories!

ಜಮ್ಮುನಲ್ಲಿ ಬಿಜೆಪಿ ನಾಯಕರಿಗೆ ದಿಗ್ಬಂಧನ

Ananth Kumar, Sushma Swaraj, Arun Jaitley
ಜಮ್ಮು, ಜ. 24 : ಜನವರಿ 25ರಂದು ನಡೆಸಲಾಗುತ್ತಿರುವ 'ಏಕತಾ ಯಾತ್ರಾ' ಬೃಹತ್ ರ್ಯಾಲಿಯಲ್ಲಿ ಭಾಗವಹಿಸಲೆಂದು ಜಮ್ಮುವಿಗೆ ಬಂದಿದ್ದ ಬಿಜೆಪಿಯ ನಾಯಕರುಗಳಾದ ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಮತ್ತು ಅನಂತ್ ಕುಮಾರ್ ಅವರನ್ನು ಜಮ್ಮು ವಿಮಾನ ನಿಲ್ದಾಣದಲ್ಲಿಯೇ ದಿಗ್ಬಂಧನ ಹೇರಲಾಗಿದೆ.

ಜಮ್ಮು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಬಿಜೆಪಿ ನಾಯಕರನ್ನು ಹೊರಹೋಗಲು ಬಿಡದೆ ದೆಹಲಿ ವಾಪಸ್ ಹೋಗಬೇಕೆಂದು ಅಧಿಕಾರಿಗಳು ತಾಕೀತು ಮಾಡಿದರು. 'ನಮ್ಮ ಅಪರಾಧವೇನೆಂದು ತಿಳಿಯುತ್ತಿಲ್ಲ. ರಾಷ್ಟ್ರಧ್ವಜ ಹಾರಿಸುತ್ತಿರುವುದಕ್ಕಾಗಿ ನಮ್ಮ ಜೊತೆ ಈ ರೀತಿ ಅನುಚಿತವಾಗಿ ವರ್ತಿಸಲಾಗುತ್ತಿದೆ' ಎಂದು ಸುಷ್ಮಾ ಸ್ವರಾಜ್ ಟ್ವಿಟರ್ ನಲ್ಲಿ ಸಂದೇಶ ರವಾನಿಸಿದ್ದಾರೆ.

ಏಕತಾ ಯಾತ್ರೆಯ ನೇತೃತ್ವ ವಹಿಸಿರುವ ಯುವ ಮೋರ್ಚಾದ ನಾಯಕ ಅನುರಾಗ್ ಠಾಕೂರ್ ಅವರನ್ನು ಇಂದು ಭೇಟಿಯಾಗುವವರಿದ್ದರು. ಏಕತಾ ಯಾತ್ರೆ ಜ.25ರಿಂದ ಪ್ರಾರಂಭವಾಗಿ ಜ.26ರಂದು ಗಣರಾಜ್ಯೋತ್ಸವದಂದು ಶ್ರೀನಗರದ ಲಾಲ್ ಚೌಕದಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಕೊನೆಗೊಳ್ಳಲಿದೆ. ಬಿಜೆಪಿ ನಾಯಕರನ್ನು ಹಿಡಿದಿಟ್ಟಿದ್ದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ವಿಮಾನ ನಿಲ್ದಾಣದ ಹೊರಗಡೆ ಭಾರೀ ಪ್ರತಿಭಟನೆ ನಡೆಸಿದರು.

'ಲಾಲ್ ಚೌಕದಲ್ಲಿ ತಿರಂಗಾ ಬಾವುಟವನ್ನು ಹಾರಿಸಿಯೇ ತೀರುತ್ತೇವೆ. ಇದಕ್ಕೆ ರಾಜ್ಯ ಸರಕಾರ ಅವಕಾಶ ಮಾಡಿಕೊಡಬೇಕು. ನಮ್ಮ ಮೇಲೆ ಸಿಆರ್ಪಿಸಿಯ 144ನೇ ಸೆಕ್ಷನ್ ಅನ್ನು ಹೇರುವುದು ತರವಲ್ಲ' ಎಂದು ಸುಷ್ಮಾ ಸ್ವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ದನಿಗೂಡಿಸಿರುವ ಜೇಟ್ಲಿ ಅವರು, 'ಅಪರಾಧಿ ದಂಡ ಸಂಹಿತೆಯ 144ನೇ ಸೆಕ್ಷನ್ ಪ್ರಕಾರ ನಾಲ್ಕಕ್ಕಿಂತ ಹೆಚ್ಚು ಜನರ ಮೇಲೆ ನಿಷೇಧಾಜ್ಞೆ ಹೊರಿಸಲು ಅವಕಾಶವಿದೆ. ಇಲ್ಲಿ ನಮ್ಮ ಮೂವರ ಮೇಲೆ ನಿಷೇಧಾಜ್ಞೆ ಹೇರುವುದು ಸಲ್ಲ' ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಸರಕಾರದ ಈ ಕ್ರಮವನ್ನು ತೀವ್ರವಾಗಿ ಟೀಕಿಸಿರುವ ಅನಂತ್ ಕುಮಾರ್ ಅವರು, 'ಜಮ್ಮ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಹೇರಿದಂತೆ ಭಾಸವಾಗುತ್ತಿದೆ. ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ವಾಪಸ್ ಹೋಗುವಂತೆ ಮ್ಯಾಜಿಸ್ಟ್ರೇಟ್ ಆದೇಶ ಕಳಿಸಿದ್ದಾರೆ. ರಾಷ್ಟ್ರಧ್ವಜ ಹಾರಿಸಿ ಎಂಥ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿಲ್ಲ. ಇದು ಪ್ರತಿ ಭಾರತೀಯನ ಕರ್ತವ್ಯ. ನಮ್ಮನ್ನು ಕಾಪಾಡುವುದು ಒಮರ್ ಅಬ್ದುಲ್ಲಾ ಅವರ ಕರ್ತವ್ಯ ಕೂಡ' ಎಂದು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿಯ ವಕ್ತಾರ ರವಿಶಂಕರ್ ಪ್ರಸಾದ್ ಅವರು, ನಮಗೆ ಕೇಂದ್ರ ಸರಕಾರವಾಗಲಿ, ಜಮ್ಮು ಮತ್ತು ಕಾಶ್ಮೀರ ಸರಕಾರದೊಂದಿಗಾಗಲಿ ಸಂಘರ್ಷ ಬೇಕಿಲ್ಲ. ಬೇಕಿರುವುದು ಅವೆರಡು ಸರಕಾರಕ್ಕೆ. ನಮ್ಮ ಸಂಘರ್ಷವೇನಿದ್ದರೂ ಪ್ರತ್ಯೇಕತಾವಾದಿಗಳೊಂದಿಗೆ ಮಾತ್ರ. ಇದು ನಮಗೆ ತುರ್ತು ಪರಿಸ್ಥಿತಿ ಹೇರಿದ್ದ ದಿನಗಳನ್ನು ನೆನಪಿಸುತ್ತಿದೆ ಎಂದು ಟೀಕಿಸಿದ್ದಾರೆ. ರಾಷ್ಟ್ರಪತಿಯವರು ಮಧ್ಯ ಪ್ರವೇಸಿಸಿ ಯುವ ಮೋರ್ಚಾಕ್ಕೆ ತ್ರಿವರ್ಣ ಧ್ವಜ ಹಾರಿಸಲು ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಕೋರಿದ್ದಾರೆ. [ರಾಷ್ಟ್ರಧ್ವಜ]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+